ಹೊಸದಿಲ್ಲಿ| ಆಹಾರದಲ್ಲಿ ಹಲ್ಲಿ ಪತ್ತೆ: 50 ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
PC : NDTV
ಹೊಸದಿಲ್ಲಿ: ಆಹಾರದಲ್ಲಿ ಹಲ್ಲಿ ಬಿದ್ದು ಕನಿಷ್ಠ ಪಕ್ಷ 50 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮಗೆ ಪೂರೈಸಲಾಗಿದ್ದ ಆಹಾರದಲ್ಲಿ ಹಲ್ಲಿಯಿತ್ತು ಎಂದು ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯು ಪೂರಣ್ ಮಾಲ್ ಲಹೋಟಿ ಸರಕಾರಿ ಪಾಲಿಟೆಕ್ನಿಕ್ ಬಾಲಕಿಯ ವಿದ್ಯಾರ್ಥಿ ನಿಲಯದಲ್ಲಿ ಸಂಭವಿಸಿದೆ.
ನಾವು ರಾತ್ರಿ 9 ಗಂಟೆಗೆ ಭೋಜನ ಸೇವಿಸಿದ ನಂತರ ಅಸ್ವಸ್ಥಗೊಂಡೆವು. ನಮಗೆ ಪೂರೈಸಲಾಗಿದ್ದ ಆಹಾರದಲ್ಲಿ ಹಲ್ಲಿ ಕಂಡು ಬಂದಿತ್ತು ಎಂದು ಆ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕೂಡಲೇ ವಿದ್ಯಾರ್ಥಿನಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹುಷಾರಾದ ಕೆಲವು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯಕ್ಕೆ ಮರಳಲು ಅನುಮತಿ ನೀಡಲಾಗಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿನಿಯರನ್ನು ವೈದ್ಯಕೀಯ ನಿಗಾದಲ್ಲಿಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.