ಈಡಿಯಿಂದ ಅಕ್ರಮ ಬಂಧನ ಆರೋಪ | ತುರ್ತು ವಿಚಾರಣೆ ಕೋರಿ ಹೈಕೋರ್ಟ್ಗೆ ಮೊರೆ ಹೋದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ | Photo: PTI
ಹೊಸದಿಲ್ಲಿ : ದಿಲ್ಲಿ ಮದ್ಯನೀತಿ ಹಗರಣದಲ್ಲಿ ಮಾರ್ಚ್ 28 ರವರೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಜಾರಿ ನಿರ್ದೇಶನಾಲಯ(ಈಡಿ)ದ ಕಸ್ಟಡಿಗೆ ನೀಡಿದ ಒಂದು ದಿನದ ನಂತರ, ಕೇಜ್ರಿವಾಲ್ ಶನಿವಾರ ಈಡಿಯು ತನ್ನನ್ನು ಅಕ್ರಮವಾಗಿ ಬಂಧಿಸಿದೆ ಎಂದು ಆರೋಪಿಸಿ ತುರ್ತು ವಿಚಾರಣೆಯನ್ನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈಡಿ ಕಸ್ಟಡಿಯಿಂದ ಸಂದೇಶವನ್ನು ಕಳುಹಿಸಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು " ನನ್ನ ಪ್ರತಿ ಹನಿ ರಕ್ತವು ರಾಷ್ಟ್ರಕ್ಕಾಗಿ. ಜೈಲಿನ ಹೊರಗೂ - ಒಳಗೂ ಪ್ರತಿ ಕ್ಷಣವೂ ದೇಶ ಸೇವೆಯಲ್ಲಿ ಮುಂದುವರೆಯುತ್ತೇನೆ” ಎಂದು ತಿಳಿಸಿದ್ದರು.
Next Story