ಶಿಕ್ಷೆಯ ವಿರುದ್ಧ ಮೇಧಾ ಪಾಟ್ಕರ್ ಮೇಲ್ಮನವಿ | ಈ ಮನವಿ ಮನ್ನಿಸಲು ಅರ್ಹವಲ್ಲ ಎಂದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್
ವಿ.ಕೆ.ಸಕ್ಸೇನಾ | PC: PTI
ಹೊಸದಿಲ್ಲಿ: ತಮಗೆ ವಿಧಿಸಿರುವ ಐದು ತಿಂಗಳ ಶಿಕ್ಷೆಯ ವಿರುದ್ಧ ನರ್ಮದಾ ಬಚಾವ್ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಸಲ್ಲಿಸಿದ್ದ ಮೇಲ್ಮನವಿಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ, ಈ ಮೇಲ್ಮನವಿ ಕಾನೂನಾತ್ಮಕವಾಗಿ ಮನ್ನಿಸಲು ಅರ್ಹವಲ್ಲ ಹಾಗೂ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗುಜರಾತ್ ನ ಸರಕಾರೇತರ ಸಂಸ್ಥೆಯ ಮುಖ್ಯಸ್ಥರಾಗಿದ್ದ ಸಕ್ಸೇನಾ 23 ವರ್ಷಗಳ ಹಿಂದೆ ಮೇಧಾ ಪಾಟ್ಕರ್ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 29ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅಮಾನತುಗೊಳಿಸಿ, ಅವರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು.
ಜುಲೈ 1ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 10 ಲಕ್ಷ ರೂ. ದಂಡ ವಿಧಿಸುವುದರೊಂದಿಗೆ ಐದು ತಿಂಗಳ ಸಾಜಾ ಶಿಕ್ಷೆಯನ್ನು ವಿಧಿಸಿತ್ತು.
ಆದರೆ, ಮೇಧಾ ಪಾಟ್ಕರ್ ಸಲ್ಲಿಸಿರುವ ಮೇಲ್ಮನವಿಗೆ ಆಕ್ಷೇಪಿಸಿರುವ ಸಕ್ಸೇನಾ ವಕೀಲರಾದ ಗಜಿಂದರ್ ಕುಮಾರ್ ಹಾಗೂ ಕಿರಣ್ ಜೈ, ಅರ್ಜಿಯಲ್ಲಿ ಕೇವಲ ಅವರ ವಕೀಲರ ಸಹಿ ಇದ್ದು, ಮೇಧಾ ಪಾಟ್ಕರ್ ಸಹಿ ಇಲ್ಲದೆ ಇರುವುದರಿಂದ ಈ ಅರ್ಜಿಯು ವಜಾಗೊಳ್ಳಲು ಯೋಗ್ಯವಾಗಿದೆ ಎಂದು ಬುಧವಾರ ಹೇಳಿದ್ದಾರೆ.
ಜುಲೈ 24ರಂದು ಸಲ್ಲಿಕೆಯಾಗಿರುವ ಮೇಲ್ಮನವಿಯಲ್ಲಿ ಮೇಧಾ ಪಾಟ್ಕರ್ ವಕೀಲರ ಸಹಿ ಮಾತ್ರವಿದೆ ಎಂದು ಅವರು ತಿಳಿಸಿದ್ದಾರೆ.