ದಿಲ್ಲಿ ಗಲಭೆ: 5 ಪ್ರಕರಣಗಳಲ್ಲಿ ತಾಹಿರ್ ಹುಸೇನ್ ಗೆ ಜಾಮೀನು
ಹೊಸದಿಲ್ಲಿ: 2020ರ ಗಲಭೆಗಳಿಗೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಗೆ ದಿಲ್ಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಆದರೆ, ಅವರ ವಿರುದ್ಧ ಇನ್ನೂ ಹಲವು ಪ್ರಕರಣಗಳಿರುವುದರಿಂದ ಅವರು ಜೈಲಿನಲ್ಲೇ ಉಳಿಯುತ್ತಾರೆ.
2020 ಫೆಬ್ರವರಿ 23 ಮತ್ತು 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ ಕೋಮು ಗಲಭೆಗೆ ಸಂಬಂಧಿಸಿದ ಪ್ರಕರಣಗಳು ಇವಾಗಿವೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವು ನೂರು ಮಂದಿ ಗಾಯಗೊಂಡಿದ್ದಾರೆ.
ಹುಸೇನ್ ಗೆ ಜಾಮೀನು ಸಿಕ್ಕಿದ ಎಲ್ಲಾ ಐದು ಎಫ್ಐಆರ್ ಗಳು ದಯಾಳ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಈ ಪ್ರಕರಣಗಳ ಇತರ ಎಲ್ಲಾ ಆರೋಪಿಗಳು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ ಮತ್ತು ತನ್ನ ಕಕ್ಷಿಗಾರ ಮಾತ್ರ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ಹುಸೇನ್ ಪರವಾಗಿ ಹಾಜರಾದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ವಾದಿಸಿದರು.
Next Story