ದಿಲ್ಲಿಯಲ್ಲಿ ಶೀತ ವಾತಾವರಣ: ಜ. 12ರ ವರೆಗೆ 5ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಜೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಿಲ್ಲಿಯಲ್ಲಿ ಶೀತ ವಾತಾವರಣ ಮುಂದುವರಿದಿರುವುದರಿಂದ ದಿಲ್ಲಿ ಸರ್ಕಾರವು ನರ್ಸರಿಯಿಂದ ಐದನೆ ತರಗತಿವರೆಗಿನ ವಿದ್ಯಾರ್ಥಿಗಳ ಚಳಿಗಾಲದ ರಜೆಯನ್ನು ಜನವರಿ 12ರವರೆಗೆ ವಿಸ್ತರಿಸಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದಿಲ್ಲಿ ಸಚಿವೆ ಅತಿಶಿ, ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮತ್ತೆ ಐದು ದಿನ ರಜೆ ವಿಸ್ತರಿಸಲಾಗಿದ್ದು, ಜನವರಿ 12ರವರೆಗೆ ಶಾಲೆಗಳು ಮುಚ್ಚಿರಲಿವೆ. ದಿಲ್ಲಿಯಲ್ಲಿ ಶೀತ ವಾತಾವರಣವು ಮುಂದುವರಿದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶೀತ ಮಾರುತ ಹಾಗೂ ಭಾರತೀಯ ಹವಾಮಾನ ಇಲಾಖೆಯು ಯೆಲ್ಲೊ ಅಲರ್ಟ್ ಘೋಷಿಸಿರುವುದರಿಂದ ದಿಲ್ಲಿ ಸರ್ಕಾರವು ನಿನ್ನೆಯ ಹಿಂದಿನ ಆದೇಶದಲ್ಲಿ ಎಲ್ಲ ಸರ್ಕಾರಿ ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ಜನವರಿ 10ರವರೆಗೆ ರಜೆಯನ್ನು ವಿಸ್ತರಿಸಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ ಸರ್ಕಾರವು ತನ್ನ ಆದೇಶವನ್ನು ಪರಿಷ್ಕರಿಸಿತು. ಇದರ ಬೆನ್ನಿಗೇ ಅತಿಶಿಯವರ ಪ್ರಕಟಣೆಯು ಹೊರ ಬಿದ್ದಿದೆ.