ದೆಹಲಿ ವಿವಿ ವಿದ್ಯಾರ್ಥಿ ಚುನಾವಣೆ: ಎಬಿವಿಪಿ ಗೆಲುವು
Photo: X \ @ANI
ಹೊಸದಿಲ್ಲಿ: ದೆಹಲಿ ವಿವಿ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂರು ಪ್ರಮುಖ ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆ ಎಬಿವಿಪಿ ಪಾಲಾಗಿದೆ. ಉಪಾಧ್ಯಕ್ಷ ಹುದ್ದೆ ಎನ್ಎಸ್ಯುಐ ಜಯಿಸಿದೆ. ಎಬಿವಿಪಿಯ ತುಷಾರ್ ದೆಢಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಭಿ ದಾಹಿಯಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಪರಾಜಿತಾ ಮತ್ತು ಜಂಟಿ ಕಾರ್ಯದರ್ಶಿಯಾಗಿ ಸಚಿನ್ ಬಸ್ಲಾ ಚುನಾಯಿತರಾಗಿದ್ದಾರೆ.
ಎಬಿವಿಪಿ ಮತ್ತು ಎನ್ಎಸ್ಯುಐ ನಡುವೆ ನೇರ ಹಣಾಹಣಿ ನಡೆದಿತ್ತು. ಸಿಪಿಐ(ಎಂಎಲ್) ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವೂ ಸ್ಪರ್ಧಿಸಿತ್ತು. ಒಟ್ಟು 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಕೋವಿಡ್–19 ಕಾರಣದಿಂದಾಗಿ 2020 ಹಾಗೂ 2021ರಂದು ಚುನಾವಣೆ ನಡೆದಿರಲಿಲ್ಲ. ಎರಡು ವರ್ಷಗಳ ಬಳಿಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟಕ್ಕೆ ಸೆ. 22ರಂದು ಚುನಾವಣೆ ನಡೆದಿತ್ತು. ಕಡಿಮೆ ದರಕ್ಕೆ ಹಾಸ್ಟೆಲ್ ಸೌಕರ್ಯ, ಶುಲ್ಕ ಹೆಚ್ಚಳ, ಕಾಲೇಜು ಕಾರ್ಯಕ್ರಮಗಳಲ್ಲಿ ಭದ್ರತೆ ಹೆಚ್ಚಿಸುವುದು ಮತ್ತು ಮುಟ್ಟಿನ ರಜೆ ಪ್ರಮುಖ ಚುನಾವಣಾ ವಿಷಯವಾಗಿತ್ತು.
#WATCH | Delhi: Akhil Bharatiya Vidyarthi Parishad (ABVP) Supporters celebrate at the North Campus after winning three seats in the DUSU elections. pic.twitter.com/tJXyoDCjtr
— ANI (@ANI) September 23, 2023