ಜ. 11, 12ಕ್ಕೆ ‘ವಿಕಸಿತ ಭಾರತ ಯುವ ನಾಯಕರ ಸಂವಾದ’ : ಪ್ರಧಾನಿ
“ರಾಜಕೀಯ ಹಿನ್ನೆಲೆ ಇಲ್ಲದ ಯುವಕರನ್ನು ರಾಜಕೀಯಕ್ಕೆ ತರುವ ಯತ್ನ”
ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಜನವರಿ 11 ಹಾಗೂ 12ರಂದು ದಿಲ್ಲಿಯ ಭಾರತ್ ಮಂಟಪದಲ್ಲಿ ‘ವಿಕಸಿತ ಭಾರತ ಯುವ ನಾಯಕರ ಸಂವಾದ’ ಆಯೋಜಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಿಳಿಸಿದ್ದಾರೆ.
ಇದು ರಾಜಕೀಯ ಹಿನ್ನೆಲೆ ಇಲ್ಲದ ಯುವಕರನ್ನು ರಾಜಕೀಯಕ್ಕೆ ಬರುವಂತೆ ಮಾಡುವ ಪ್ರಯತ್ನದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ತಿಂಗಳ ‘ಮನ್ ಕಿ ಬಾತ್’ನ 116ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಜನವರಿ 12ರಂದು ಸ್ವಾಮಿ ವಿವೇಕಾನಂದರ 162ನೇ ಜಯಂತಿ ದಿನ. ಆ ದಿನವನ್ನು ತುಂಬಾ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು ಎಂದರು.
ರಾಜಕೀಯ ಕುಟುಂಬ ಹಿನ್ನೆಲೆ ಇಲ್ಲದೆ ಯುವಕರು ರಾಜಕೀಯ ಸೇರುವಂತೆ ನಾನು ಕೆಂಪು ಕೋಟೆಯ ಆವರಣದಿಂದ ಮನವಿ ಮಾಡಿದ್ದೇನೆ. ಇಂತಹ 1 ಲಕ್ಷ ಯುವಕರು ರಾಜಕೀಯ ಪ್ರವೇಶಿಸಲು ದೇಶದಲ್ಲಿ ಹಲವು ವಿಶೇಷ ಅಭಿಯಾನ ನಡೆಸಲಾಗುವುದು. ಇಂತಹ ಕಾರ್ಯಕ್ರಮಗಳಲ್ಲಿ ‘ವಿಕಸಿತ ಭಾರತ ಯುವ ನಾಯಕರ ಸಂವಾದ’ ಕೂಡ ಒಂದು ಎಂದು ಅವರು ಹೇಳಿದರು.
Next Story