ಕೊಯಮತ್ತೂರಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಮ್ ಅಭಿವೃದ್ದಿ : ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ
ಎಂ.ಕೆ. ಸ್ಟಾಲಿನ್ | PC : PTI
ಚೆನ್ನೈ: ಕೊಯಮತ್ತೂರಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಯೋಜನೆಯ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಹಿರಂಗಪಡಿಸಿದರು.
ಕೊಯಮತ್ತೂರಿನ ಕ್ರೀಡಾಪ್ರೇಮಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ನಾವು ಕೊಯಮತ್ತೂರಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಮ್ನ್ನು ಸ್ಥಾಪಿಸಲು ಪ್ರಯತ್ನಿಸಲಿದ್ದೇವೆ. ನಮ್ಮ ಸಚಿವ ಟಿಆರ್ಬಿ ರಾಜ ಹೇಳಿದಂತೆ ಈ ಕ್ರೀಡಾಂಗಣವು ಚೆನ್ನೈನ ಐಕಾನಿಕ್ ಮ್ಯಾಕ್ ಕ್ರೀಡಾಂಗಣದ ನಂತರ ತಮಿಳುನಾಡಿನ ಎರಡನೇ ಅಂತರ್ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ತಾಣ ಇದಾಗಲಿದೆ. ನಮ್ಮ ಸರಕಾರ ಹಾಗೂ ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಅವರು ತಮಿಳುನಾಡಿನಲ್ಲಿ ಪ್ರತಿಭೆಯನ್ನು ಪೋಷಿಸಲು ಹಾಗೂ ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸಲು ಬದ್ಧರಾಗಿದ್ದಾರೆ ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ.
ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ನ ತವರು ಮೈದಾನವಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಎ. ಚಿದಂಬರಂ ಕ್ರೀಡಾಂಗಣದ ನಂತರ ಇದು ಎರಡನೇ ಅಂತರ್ರಾಷ್ಟ್ರೀಯ ಕ್ರೀಡಾಂಗಣವಾಗಲಿದೆ. 1916ರಲ್ಲಿ ಸ್ಥಾಪಿತವಾಗಿರುವ, ಚೆಪಾಕ್ ಎಂದೇ ಕರೆಯಲಾಗುತ್ತಿರುವ ಇದು ದೇಶದ ಎರಡನೇ ಅತ್ಯಂತ ಹಳೆಯ ಕ್ರೀಡಾಂಗಣವಾಗಿದೆ.