ಅಂಧ ಭಕ್ತಿಯ ಪ್ರದರ್ಶನ ನಿಲ್ಲಬೇಕು: ಹತ್ರಾಸ್ ಘಟನೆ ಕುರಿತು ಉತ್ತರ ಪ್ರದೇಶ ರಾಜ್ಯಪಾಲರ ಪ್ರತಿಕ್ರಿಯೆ
ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ (PTI)
ಹೊಸದಿಲ್ಲಿ: ಹತ್ರಾಸ್ ನಲ್ಲಿ ಸ್ವಘೋಷಿತ ದೇವಮಾನವ ಭೋಲೆ ಬಾಬಾ ಆಲಿಯಾಸ್ ಸೂರಜ್ಪಾಲ್ ಸಿಂಗ್ ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಜನರು ಅಂಧ ಭಕ್ತಿಯ ಪ್ರದರ್ಶನದಲ್ಲಿ ತೊಡಗಬಾರದು ಎಂದು ಹೇಳಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿದ ಅವರು, “ಇಂತಹ ಘಟನೆಗಳಿಗೆ ಕಾರಣವಾಗುವ ರೀತಿಯಲ್ಲಿ ಜನರೊಂದಿಗೆ ವರ್ತಿಸಬಾರದು, ನನ್ನ ಚರಣರಾಜ್ ತೆಗೆದುಕೊಂಡು ನಿಮ್ಮ ತಲೆಗೆ ಮುಟ್ಟಿಸಿ, ನಿಮ್ಮ ಎಲ್ಲಾ ಕಷ್ಟ ಮತ್ತು ನೋವುಗಳು ಹೋಗುತ್ತವೆ ಎಂದರೆ ಅದು ನಿಜವಾಗಿಯೂ ನಡೆಯುತ್ತದೆಯೇ? ಅಂಧ ಭಕ್ತಿ ಪ್ರದರ್ಶಿಸುವುದು ಮತ್ತು ಜನರೆದುರು ಇಂತಹ ಮಾತುಗಳನ್ನಾಡುವುದು ಸರಿಯಲ್ಲ, ಇಂತಹ ಜನರನ್ನು ಶಿಕ್ಷಿಸಬೇಕು, ಜನರನ್ನು ಅಂಧ ಭಕ್ತಿಯಿಂದ ಮುಕ್ತರನ್ನಾಗಿಸಲು ನಾವು ಶ್ರಮಿಸುತ್ತಿದ್ದೇವೆ,: ಎಂದು ಅವರು ಹೇಳಿದರು.
Next Story