"ದಿ ಕೇರಳ ಸ್ಟೋರಿ' ಚಲನಚಿತ್ರ ಪ್ರಸಾರ ಮಾಡುವ ತನ್ನ ನಿರ್ಧಾರವನ್ನು ದೂರದರ್ಶನ ಹಿಂಪಡೆಯಬೇಕು: ಪಿಣರಾಯಿ ವಿಜಯನ್
ಚಿತ್ರದ ಪ್ರಸಾರದಿಂದ ರಾಜ್ಯದಲ್ಲಿ ಕೋಮು ಪ್ರಕ್ಷುಬ್ಧತೆ ಉಂಟಾಗುವ ಸಾಧ್ಯತೆ ಇದೆ ಎಂದ ಕೇರಳ ಸಿಎಂ
ತಿರುವನಂತಪುರಂ: 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ಪ್ರಸಾರ ಮಾಡುವ ತನ್ನ ನಿರ್ಧಾರವನ್ನು ಸರಕಾರಿ ಸ್ವಾಮ್ಯದ ದೂರದರ್ಶನವು ಹಿಂಪಡೆಯಬೇಕು ಎಂದು ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಈ ಚಿತ್ರದ ಪ್ರಸಾರದಿಂದ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕೋಮು ಪ್ರಕ್ಷುಬ್ಧತೆ ಉಂಟಾಗುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸಿದ್ದಾರೆ.
ಸುದೀಪ್ತೊ ಸೇನ್ ನಿರ್ದೇಶಿಸಿರುವ ಈ ಚಿತ್ರವು ಮೇ 5ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕೇರಳ ಮಹಿಳೆಯರನ್ನು ಮತಾಂತರಗೊಳಿಸಿ, ಅವರನ್ನು ಉಗ್ರಗಾಮಿ ಗುಂಪಿಗೆ ಹೇಗೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಚಿತ್ರ ನಿರ್ಮಾಪಕರು ಆರಂಭದಲ್ಲಿ ಕೇರಳದ 32,000 ಮಹಿಳೆಯರು ಇಸ್ಲಾಮಿಕ್ ಸ್ಟೇಟ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಪ್ರತಿಪಾದಿಸಿದ್ದರು. ಆದರೆ, ಈ ಕುರಿತು ಸಾಕ್ಷ್ಯಾಧಾರ ಒದಗಿಸುವಂತೆ ಕೇಳಿದಾಗ, ತಮ್ಮ ಚಿತ್ರದ ಟ್ರೇಲರ್ ಅನ್ನು ಬದಲಿಸಿದ್ದ ಚಿತ್ರ ತಂಡವು, "ಈ ಚಿತ್ರವು ಮೂವರು ಯುವತಿಯರ ನೈಜ ಕತೆಯನ್ನು ಒಳಗೊಂಡಿದೆ" ಎಂದು ಹೇಳಿಕೊಂಡಿತ್ತು.
ಎಪ್ರಿಲ್ 5ರಂದು 'ದಿ ಕೇರಳ ಸ್ಟೋರಿ'ಯನ್ನು ಪ್ರಸಾರ ಮಾಡುವುದಾಗಿ ಇದಕ್ಕೂ ದೂರದರ್ಶನ ಪ್ರಕಟಿಸಿದೆ.