ದಿನಪತ್ರಿಕೆಗಳ ಕಚೇರಿಗಳ ತಪಾಸಣೆಗೆ ಪ್ರೆಸ್ ರಿಜಿಸ್ಟ್ರಾರ್ ಗೆ ಅವಕಾಶ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕರಡು ʼಪ್ರೆಸ್ ಎಂಡ್ ರಿಜಿಸ್ಟ್ರೇಶನ್ ಆಫ್ ಪೀರಿಯಾಡಿಕಲ್ಸ್ ರೂಲ್ಸ್ 2024ʼ ಪ್ರಕಾರ ಯಾವುದೇ ನಿಯತಕಾಲಿಕದ ಪ್ರಕಾಶಕರು ನಿಯಮಿತವಾಗಿ ವಾರ್ಷಿಕ ಸ್ಟೇಟ್ಮೆಂಟ್ ಒದಗಿಸಲು ವಿಫಲರಾದರೆ ಅಥವಾ “ವಿಶೇಷ ಸನ್ನಿವೇಶಗಳ” ಕಾರಣ ಇಂತಹ ಕ್ರಮವನ್ನು ಡೆಸ್ಕ್ ಆಡಿಟ್ ಶಿಫಾರಸು ಮಾಡಿದರೆ ಅಂತಹ ನಿಯತಕಾಲಿಕದ ಕಚೇರಿಯಲ್ಲಿ ತಪಾಸಣೆಯನ್ನು ಪ್ರೆಸ್ ರಿಜಿಸ್ಟ್ರಾರ್ ನಡೆಸಬಹುದು ಎಂದು ಹೇಳುತ್ತದೆ.
ಪ್ರೆಸ್ ಎಂಡ್ ಪೀರಿಯಾಡಿಕಲ್ಸ್ ರಿಜಿಸ್ಟ್ರೇಷನ್ ಆಕ್ಟ್ 2023 ಜಾರಿಗಾಗಿ ಈ ಕರಡು ನಿಯಮಗಳ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ಕೋರಿದೆ.
ಒಂದು ನಿಯತಕಾಲಿಕದ ವಿರುದ್ಧದ ದೂರು, ಮಾಹಿತಿ ಅಥವಾ ಉಲ್ಲೇಖದ ನಂತರ ಭೌತಿಕ ತಪಾಸಣೆ ಅಗತ್ಯವಿದೆಯೆಂದು ಕಂಡರೂ ಪ್ರೆಸ್ ರಿಜಿಸ್ಟ್ರಾರ್ ತಪಾಸಣೆ ನಡೆಸಬಹುದಾಗಿದೆ ಎಂದು ಈ ಕರಡು ನಿಯಮ ತಿಳಿಸುತ್ತದೆ.
ಇಂತಹ ತಪಾಶಣೆ ಅಗತ್ಯವಿದ್ದಲ್ಲಿ ಈ ಕುರಿತು ಶಿಫಾರಸನ್ನು ಪ್ರೆಸ್ ರಿಜಿಸ್ಟ್ರಾರ್ ದಾಖಲೀಕರಿಸಬೇಕಿದೆ.
ಕೇಂದ್ರ ಸರ್ಕಾರದಿಂದ ಜಾಹೀರಾತು ಪಡೆಯಲು ಸೆಂಟ್ರಲ್ ಬ್ಯುರೋ ಆಫ್ ಕಮ್ಯುನಿಕೇಶನ್ ಬಳಿ ನೋಂದಣಿಗೊಂಡಿರುವ ಅಥವಾ ನೋಂದಣಿಗೊಳ್ಳಲು ಬಯಸುವ ಪ್ರತಿ ದಿನ 25,000ಕ್ಕೂ ಅಧಿಕ ಪ್ರಸಾರ ಸಂಖ್ಯೆ ಇರುವ ದಿನಪತ್ರಿಕೆ ಇದ್ದಲ್ಲಿ ಅದರ ಪ್ರಸಾರ ಸಂಖ್ಯೆಯನ್ನೂ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಪರಿಶೀಲಿಸಬಹುದಾಗಿದೆ ಎಂದು ಕರಡು ನಿಯಮಗಳು ತಿಳಿಸುತ್ತವೆ.
ಪ್ರೆಸ್ ರಿಜಿಸ್ಟ್ರಾರ್ ಜನರಲ್ ಯಾವುದೇ ದೂರು ಸ್ವೀಕರಿಸಿದ್ದರೂ ಸಹ ಅಂತಹ ನಿಯತಕಾಲಿಕಗಳ ವಿರುದ್ಧ ತಪಾಸಣೆ ನಡೆಸಬಹುದು.