ದೇಶಾದ್ಯಂತ 19 ಕೋ.ರೂ. ಮೌಲ್ಯದ ಅಕ್ರಮ ಚಿನ್ನ ವಶ
Photo : ANI
DRI busts gold smuggling syndicate, seizes 31.7 kg gold worth Rs 19 crore
ಮುಂಬೈ: ದೇಶಾದ್ಯಂತ ಮೂರು ಕಡೆಗಳಲ್ಲಿ 19 ಕೋ.ರೂ.ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ವು,ಕಳ್ಳಸಾಗಾಣಿಕೆ ಜಾಲದ ಭಾಗವಾಗಿರುವ 11 ಜನರನ್ನು ಬಂಧಿಸಿದೆ ಎಂದು ಅಧಿಕಾರಿಯೋರ್ವರು ರವಿವಾರ ತಿಳಿಸಿದರು.
ಡಿಆರ್ ಐ ಪ್ರಕಾರ ಈ ಜಾಲವು ಬಾಂಗ್ಲಾದೇಶ ಗಡಿಯ ಮೂಲಕ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡಿತ್ತು ಮತ್ತು ಅವುಗಳನ್ನು ಮುಂಬೈ,ನಾಗಪುರ ಮತ್ತು ವಾರಣಾಸಿ ಇತ್ಯಾದಿ ಕಡೆಗಳಿಗೆ ರವಾನಿಸಿತ್ತು.
ಶುಕ್ರವಾರ ಮತ್ತು ಶನಿವಾರ ವಾರಣಾಸಿ,ನಾಗಪುರ ಮತ್ತು ಮುಂಬೈಗಳಲ್ಲಿ ಸಂಘಟಿತ ಕಾರ್ಯಾಚರಣೆಗಳ ಬಳಿಕ ಡಿಆರ್ ಐ ರಸ್ತೆ ಮತ್ತು ರೈಲುಗಳ ಮೂಲಕ ವಿದೇಶಿ ಮೂಲದ ಚಿನ್ನದ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಜಾಲವನ್ನು ಭೇದಿಸಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಕಾರ್ಯಾಚರಣೆ ಸಂದರ್ಭ ಕಳ್ಳಸಾಗಣೆಯ ಚಿನ್ನದ ಜೊತೆ ಮುಂಬೈನಲ್ಲಿ ಐವರು, ವಾರಣಾಸಿಯಲ್ಲಿ ಇಬ್ಬರು ಮತ್ತು ನಾಗಪುರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.
Next Story