ಧೈರ್ಯವಿದ್ದರೆ ಯಮುನಾ ನದಿ ನೀರು ಕುಡಿಯಿರಿ: ಕಾಂಗ್ರೆಸ್, ಬಿಜೆಪಿಗೆ ಕೇಜ್ರಿವಾಲ್ ಸವಾಲು

ಅರವಿಂದ್ ಕೇಜ್ರಿವಾಲ್ | PC : PTI
ಹೊಸ ದಿಲ್ಲಿ: ಯಮುನಾ ನದಿ ನೀರಿಗೆ ಕ್ಲೋರಿನ್ ನೊಂದಿಗೆ 7 ಪಿಪಿಎಂ ಅಮೋನಿಯವನ್ನು ಮಿಶ್ರಣ ಮಾಡಲಾಗಿದ್ದು, ಇದು 7 ಪಿಪಿಎಂ ಅಮೋನಿಯ ನೀರಾಗಿದೆ. ದಿಲ್ಲಿ ನಿವಾಸಿಗಳ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್ ಕೈಜೋಡಿಸಿವೆ. ಸಂಜಯ್ ಸಿಂಗ್ ಅವರು ಈ ನೀರಿನ ಬಾಟಲಿಗಳನ್ನು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಅಮಿತ್ ಶಾ, ವಿರೇಂದ್ರ ಸಚ್ ದೇವ್, ನಯಾಬ್ ಸಿಂಗ್ ಸೈನಿ ಹಾಗೂ ರಾಹುಲ್ ಗಾಂಧಿ ಅವರಿಗೂ ಒಂದು ಬಾಟಲಿಯನ್ನು ಪೂರೈಸಲಿದ್ದಾರೆ. ಅವರಿಗೆ ಧೈರ್ಯವಿದ್ದರೆ, ಪತ್ರಿಕಾಗೋಷ್ಠಿಯಲ್ಲಿ ಈ ನೀರನ್ನು ಕುಡಿಯಬೇಕು” ಎಂದು ಆಪ್ ಮುಖ್ಯಸ್ಥ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.
ಇದಕ್ಕೂ ಮುನ್ನ, ಯಮುನಾ ನದಿ ನೀರಿಗೆ ಹರ್ಯಾಣ ಸರಕಾರವು ವಿಷ ಬೆರೆಸಿದೆ ಎಂಬ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗವು, ಈ ಆರೋಪಕ್ಕೆ ಪುರಾವೆ ಒದಗಿಸುವಂತೆ ಅವರನ್ನು ಕೋರಿತ್ತು. ಯಮುನಾ ನದಿ ನೀರಿಗೆ ಅಧಿಕ ಪ್ರಮಾಣದ ಅಮೋನಿಯಾವನ್ನು ಮಿಶ್ರಣ ಮಾಡಿರುವುದನ್ನು ನದಿಯನ್ನು ವಿಷಯಗೊಳಿಸುವ ಕೃತ್ಯ ಎಂದು ಹೋಲಿಸಬಾರದು ಎಂದು ಸೂಚಿಸಿತ್ತು. ಹರ್ಯಾಣ ಸರಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಮಾಡಿರುವ ಆರೋಪಗಳ ಕುರಿತು ವಿವರಣೆ ನೀಡಲು ಚುನಾವಣಾ ಆಯೋಗ ಮತ್ತೊಂದು ಅವಕಾಶವನ್ನು ಒದಗಿಸಿದೆ. ತಮ್ಮ ಆರೋಪಕ್ಕೆ ಪ್ರತಿಯಾಗಿ ಸ್ವರೂಪ, ಪ್ರಮಾಣ, ರೀತಿ ಹಾಗೂ ಯಮುನಾ ನದಿಯನ್ನು ವಿಷಗೊಳಿಸುವ ಕೃತ್ಯದ ವಿಧಾನಕ್ಕೆ ಪುರಾವೆ ಒದಗಿಸುವಂತೆಯೂ ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣಾ ಆಯೋಗ ಕೋರಿದೆ.