ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಭೂಕಂಪನ
Photo : ANI
ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಭೂಕಂಪನ ಸಂಭವಿಸಿದೆ.
ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಭಾಗದಲ್ಲಿ ಬೆಳಗಿನ ಜಾವ 1.49 ಕ್ಕೆ 3.7 ತೀವ್ರತೆಯ ಭೂಕಂಪನ ಆಗಿದೆ. 3.40 ರ ಸುಮಾರಿಗೆ ಪೂರ್ವ 3.4 ತೀವ್ರತೆಯ ಭೂಕಂಪನ ಆಗಿದೆ.
ಎರಡು ಬಾರಿ ಭೂಕಂಪನ ನಡೆದಿದೆಯಾದರೂ ಆಸ್ತಿಪಾಸ್ತಿ ಅಥವಾ ಪ್ರಾಣ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಮಹಾರಾಷ್ಟ್ರದ ಹಿಂಗೋಲಿ ಪ್ರದೇಶದಲ್ಲಿ 10 ನಿಮಿಷದ ಅಂತರದಲ್ಲಿ ಎರಡು ಭೂಕಂಪನ ನಡೆದಿದೆ.
ಬೆಳಗೆ 6.08 ರ ಹೊತ್ತಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿದೆ. ನಂತರ 6.19 ಹೊತ್ತಿಗೆ 3.6 ತೀವ್ರತೆಯ ಭೂಕಂಪನ ನಡೆದಿದೆ.
Next Story