ಮೊಟೊಕಾರ್ಪ್ ಅಧ್ಯಕ್ಷನಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ. ದಾಳಿ
Photo: PTI
ಹೊಸದಿಲ್ಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಹೀರೋ ಮೋಟೋ ಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ರ ನಿವಾಸ ಹಾಗೂ ಅವರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಮಂಗಳವಾರ ದಾಳಿ ನಡೆಸಿದೆ.
ದಿಲ್ಲಿ ಹಾಗೂ ನೆರೆಯ ಗುರುಗ್ರಾಮದಲ್ಲಿರುವ ಪವನ್ ಮುಂಜಾಲ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತು ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಿತು.
ಪ್ರಕರಣದ ಕುರಿತು ಕಂದಾಯ ಬೇಹುಗಾರಿಕೆ ಇಲಾಖೆಯಿಂದ ಮಾಹಿತಿ ಸ್ವೀಕರಿಸಿದ ಬಳಿಕ ಜಾರಿ ನಿರ್ದೇಶನಾಲಯ ಕ್ರಮ ತೆಗೆದುಕೊಂಡಿತು. ಪವರ್ ಮುಂಜಾಲ್ ಅವರ ನಿಕಟವರ್ತಿ ಅವರನ್ನು ದೊಡ್ಡ ಮೊತ್ತದ ಅಘೋಷಿತ ವಿದೇಶಿ ಕರೆನ್ಸಿಗಳೊಂದಿಗೆ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
ತೆರಿಗೆ ವಂಚನೆಯ ಆರೋಪದಲ್ಲಿ ಜಾರಿ ನಿರ್ದೇಶನಾಲಯ 2022 ಮಾರ್ಚ್ನಲ್ಲಿ ಹೀರೊ ಮೋಟೋಕಾರ್ಪ್ನ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಮುಂಜಾಲ್ ಅವರ ನಿವಾಸದ ಮೇಲೆ ಕೂಡ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
Next Story