ಕೇಜ್ರಿವಾಲ್ ಫೋನ್‌ನಿಂದ ಆಪ್ ಚುನಾವಣಾ ತಂತ್ರಗಾರಿಕೆಯ ಮಾಹಿತಿ ಈಡಿಗೆ ಬೇಕಿದೆ : ಆತಿಷಿ
ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು ಬಿಜೆಪಿಯ ರಾಜಕೀಯ ಅಸ್ತ್ರವೆಂಬಂತೆ ಕೆಲಸ ಮಾಡುತ್ತಿದೆ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಫೋನ್ ವಶಪಡಿಸಿಕೊಂಡು ಆಪ್‌ನ ಲೋಕಸಭಾ ಚುನಾವಣಾ ಕಾರ್ಯತಂತ್ರದ ವಿವರ ಪಡೆಯಲು ಬಯಸಿದೆ ಎಂದು ದಿಲ್ಲಿ ಸಚಿವೆ ಆತಿಷಿ ಆರೋಪಿಸಿದ್ದಾರೆ.
ದಿಲ್ಲಿ ಅಬಕಾರಿ ನೀತಿ ರಚಿಸುವಾಗ ಕೇಜ್ರಿವಾಲ್ ಬಳಿ ಇದ್ದ ಫೋನ್ ಈಗಿರದಿದ್ದರೂ, ಕೆಲವೇ ತಿಂಗಳುಗಳಷ್ಟು ಹಳೆಯದಾದ ಅವರ ಫೋನ್ ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ ಯತ್ನಿಸುತ್ತಿದೆ ಎಂದು ಅವರು ಹೇಳಿದರು.
“ವಾಸ್ತವವಾಗಿ ಕೇಜ್ರಿವಾಲ್ ಅವರ ಫೋನ್‌ನಲ್ಲೇನಿದೆ ಎಂದು ಈಡಿಗೆ ಬೇಕಿಲ್ಲ. ಆದರೆ ಬಿಜೆಪಿ ತಿಳಿಯಲು ಬಯಸಿದೆ,” ಎಂದು ಆತಿಷಿ ಹೇಳಿದರು.
“ಲೋಕಸಭಾ ಚುನಾವಣಾ ತಂತ್ರಗಾರಿಕೆ, ಪ್ರಚಾರ ಯೋಜನೆಗಳು, ಇಂಡಿಯಾ ಮೈತ್ರಿಕೂಟ ನಾಯಕರ ಜೊತೆಗಿನ ಮಾತುಕತೆ, ಸಾಮಾಜಿಕ ಜಾಲತಾಣ ಪ್ರಚಾರ ಕುರಿತು ಮಾಹಿತಿ ಅವರಿಗೆ ಕೇಜ್ರಿವಾಲ್ ಅವರ ಫೋನ್‌ನಿಂದ ಬೇಕಿದೆ,” ಎಂದು ಆತಿಷಿ ಹೇಳಿದರು.
Next Story