ವಿದೇಶಗಳಿಗೆ ಭಾರತೀಯರ ಅಕ್ರಮ ವಲಸೆ ಜಾಲಗಳ ವಿರುದ್ಧ ಈಡಿ ಕಾರ್ಯಾಚರಣೆ
Photo ; PTI
ಹೊಸದಿಲ್ಲಿ: ವಿಶೇಷವಾಗಿ ಅಮೆರಿಕ ಹಾಗೂ ಕೆನಡ ಸೇರಿದಂತೆ ಭಾರತೀಯರನ್ನು ವಿದೇಶಕ್ಕೆ ಕಳುಹಿಸುವ ಅಕ್ರಮ ವಲಸೆ ಜಾಲಗಳನ್ನು ಭೇದಿಸಲು ಜಾರಿ ನಿರ್ದೇಶನಾಲಯವು ಗುಜರಾತ್, ದಿಲ್ಲಿ, ಮಹಾರಾಷ್ಟ್ರಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.
ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ಈ ಕಾರ್ಯಾಚರಣೆಯನ್ನು ಮಾರ್ಚ್ 1ರಂದು ಆರಂಭಿಸಲಾಗಿದ್ದು, ಈ ಮೂರು ರಾಜ್ಯಗಳ 29 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆಯೆಂದು ಅದು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಏಜೆಂಟರುಗಳು, ಸಮಾಲೋಚಕರು ಸೇರಿದಂತೆ ವಿದೇಶಗಳಿಗೆ ಭಾರತೀಯರನ್ನು ರವಾನಿಸುವ ಅಕ್ರಮ ವಲಸೆ ಜಾಲದ ಜೊತೆ ನಂಟು ಹೊಂದಿರುವ ವ್ಯಕ್ತಿಗಳ ವಿಚಾರಣೆ ನಡೆಸಿರುವುದಾಗಿ ಈಡಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಕ್ರಮವಾಗಿ ವಿದೇಶಗಳಿಗೆ ಭಾರತೀಯರನ್ನು ರವಾನಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಗುಜರಾತ್ ನಲ್ಲಿ ಭಾರತ್ ಭಾಯ್ ಯಾನೆ ಬಾಬ್ಬಿ ಪಟೇಲ್, ರಾಜುಭಾಯ್ ಬೇಚಾರ್ ಭಾಯ್ ಪ್ರಜಾಪತಿ, ಭವೇಶ್ ಅಶೋಕ್ ಭಾಯ್ ಪಟೇಲ್ ಮತ್ತಿತರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.