ಚುನಾವಣಾ ಬಾಂಡ್ಗಳ ಕುರಿತ ಎಲ್ಲಾ ವಿವರಗಳನ್ನು ಮಾ.13ರೊಳಗೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಆದೇಶ
ಮಾ. 6ರೊಳಗೆ ಮಾಹಿತಿ ನೀಡುವಂತೆ ಎಸ್ಬಿಐಗೆ ಸೂಚಿಸಿದ ಸುಪ್ರೀಂ ಕೋರ್ಟ್
ಸಿಜೆಐ ಡಿ ವೈ ಚಂದ್ರಚೂಡ್ (Photo: ANI)
ಹೊಸದಿಲ್ಲಿ: ಚುನಾವಣಾ ಬಾಂಡ್ಗಳು ಅಸಂವಿಧಾನಿಕ ಎಂದು ಹೇಳಿ ಅದನ್ನು ರದ್ದುಗೊಳಿಸಿ ಇಂದು ಐತಿಹಾಸಿಕ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ, ಈ ಯೋಜನೆ 2018ರಲ್ಲಿ ಜಾರಿಗೊಂಡಂದಿನಿಂದ ಅದರ ಮೂಲಕ ರಾಜಕೀಯ ಪಕ್ಷಗಳು ನೀಡಿದ ದೇಣಿಗೆಯನ್ನು ಬಹಿರಂಗಪಡಿಸಬೇಕು. ಈ ವಿವರಗಳಲ್ಲಿ ಬಾಂಡ್ ಖರೀದಿಸಿದ ದಿನಾಂಕ, ಖರೀದಿದಾರರ ಹೆಸರು, ಬಾಂಡ್ ಮೊತ್ತ ಮತ್ತು ಅವುಗಳನ್ನು ಸ್ವೀಕರಿಸಿದ ಪಕ್ಷದ ವಿವರಗಳು ಸೇರಿರಬೇಕು, ಈ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 6ರೊಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಹೇಳಿದೆ.
ಪ್ರತಿಯೊಂದು ನಗದೀಕರಿಸಿದ ಬಾಂಡ್ ವಿವರ ನೀಡಬೇಕು. ನಿಗದಿತ 15 ದಿನಗಳೊಳಗೆ ನಗದೀಕರಿಸದ ಬಾಂಡ್ಗಳನ್ನು ವಾಪಸ್ ನೀಡಿ ಅದನ್ನು ಖರೀದಿಸಿದವರಿಗೆ ಹಣ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಚುನಾವಣಾ ಬಾಂಡ್ಗಳ ಕುರಿತ ಎಲ್ಲಾ ವಿವರಗಳನ್ನು ಮಾರ್ಚ್ 13ರೊಳಗಾಗಿ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.