ಬೋಯಿಂಗ್ 777x ವಿಮಾನ ಪೂರೈಕೆಯಲ್ಲಿ ವಿಳಂಬ: ಪರಿಹಾರ ಕೇಳಿದ ಎಮಿರೇಟ್ಸ್ ವಿಮಾನ ಸಂಸ್ಥೆಯ ಅಧ್ಯಕ್ಷ
ಎಮಿರೇಟ್ಸ್ ವಿಮಾನ ಯಾನ | PC : PTI
ದುಬೈ: ತಮ್ಮ ಸಂಸ್ಥೆ ಖರೀದಿಸಿದ್ದ ಬೋಯಿಂಗ್ 777x ವಿಮಾನಗಳ ಪೂರೈಕೆಯಲ್ಲಿ ವಿಳಂಬವಾಗಿರುವುದರಿಂದ ತಮಗೆ ಪರಿಹಾರ ನೀಡುವಂತೆ ಅಮೆರಿಕಾದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ಗೆ ರವಿವಾರ ಎಮಿರೇಟ್ಸ್ ಅಧ್ಯಕ್ಷ ಟಿಮ್ ಕ್ಲಾರ್ಕ್ ತಾಕೀತು ಮಾಡಿದ್ದಾರೆ.
ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ಹಲವಾರು ಹಾಲಿ ಬೋಯಿಂಗ್ 777 ವಿಮಾನಗಳನ್ನು ನವೀಕರಣಗೊಳಿಸುತ್ತಿದ್ದು, ಬೋಯಿಂಗ್ 777x ಎಂದು ಕರೆಯಲಾಗುವ ಹೊಸ ಆವೃತ್ತಿಯ ವಿಮಾನಗಳ ನಿರೀಕ್ಷೆಯಲ್ಲಿದೆ.
ಬೋಯಿಂಗ್ ಸಂಸ್ಥೆಯು ನವೀಕರಣದ ವೇಗವನ್ನು ತ್ವರಿತಗೊಳಿಸಬೇಕು ಎಂದು ಕ್ಲಾರ್ಕ್ ಆಗ್ರಹಿಸಿದ್ದಾರೆ.
ದುಬೈನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 777x ಆವೃತ್ತಿಯ ವಿಮಾನಗಳ ಪೂರೈಕೆಯನ್ನು ಯಾವಾಗ ಪ್ರಾರಂಭಿಸಲಾಗುತ್ತದೆ ಎಂದು ಬೋಯಿಂಗ್ ಸಂಸ್ಥೆಗೆ ನಿಖರವಾಗಿ ಹೇಳಲಾಗುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲತಃ ಐದು ವರ್ಷಗಳ ಮುಂಚಿತವಾಗಿ ನಿಗದಿಯಾಗಿದ್ದ ಬೋಯಿಂಗ್ 777x ವಿಮಾನಗಳ ಪೂರೈಕೆಯನ್ನು 2025ರಲ್ಲಿ ಪ್ರಾರಂಭಿಸಲಾಗುವುದು ಎಂದು ಬೋಯಿಂಗ್ ಸಂಸ್ಥೆ ಸ್ಪಷ್ಟಪಡಿಸಿದೆ.