ಮಹಾರಾಷ್ಟ್ರ- ಛತ್ತೀಸ್ಗಡ ಗಡಿಯಲ್ಲಿ ಎನ್ಕೌಂಟರ್| 12 ನಕ್ಸಲೀಯರು ಸಾವು, ಇಬ್ಬರು ಪೊಲೀಸರಿಗೆ ಗಾಯ
ಸಾಂದರ್ಭಿಕ ಚಿತ್ರ | PTI
ರಾಯ್ಪುರ : ಛತ್ತೀಸ್ಗಢ ಗಡಿ ಸಮೀಪದ ಮಹಾರಾಷ್ಟ್ರದ ಗಾಡ್ಜಿರೋಲಿ ಜಿಲ್ಲೆಯಲ್ಲಿ ಬುಧವಾರ ಪೊಲೀಸರು ಹಾಗೂ ಕಮಾಂಡೊಗಳು ನಡೆಸಿದ ಎನ್ಕೌಂಟರ್ನಲ್ಲಿ ಕನಿಷ್ಠ 12 ಮಂದಿ ನಕ್ಸಲೀಯರು ಮೃತಪಟ್ಟಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ವಾಂಡೋಲಿ ಗ್ರಾಮದಲ್ಲಿ ಸಿ60 ಕಮಾಂಡೊಗಳು ಹಾಗೂ ನಕ್ಸಲೀಯರ ನಡುವೆ ಅಪರಾಹ್ನ ಭಾರೀ ಗುಂಡಿನ ಕಾಳಗ ಆರಂಭವಾಯಿತು. ಇದು 6 ಗಂಟೆಗಳ ಕಾಲ ನಡೆಯಿತು ಎಂದು ಗಾಡ್ಚಿರೋಳಿಯ ಪೊಲೀಸ್ ಅಧೀಕ್ಷಕ ನಿಲೋತ್ಪಲ್ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಪೊಲೀಸರು ನಕ್ಸಲೀಯರ 12 ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. 3 ಎಕೆ-47, 2 ಇನ್ಸಾಸ್ ರೈಫಲ್, ಕಾರ್ಬೈನ್ ಹಾಗೂ ಎಸ್ಎಲ್ಆರ್ ಸೇರಿದಂತೆ ಸೇರಿದಂತೆ 7 ಆಟೋಮೋಟಿವ್ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ ನಕ್ಸಲೀಯರಲ್ಲಿ ಓರ್ವನನ್ನು ಡಿವಿಸಿಎಂ ಲಕ್ಷ್ಮಣ್ ಅತ್ರಾಮ್ ಆಲಿಯಾಸ್ ವಿಶಾಲ್ ಅತ್ರಾಮ್ ಎಂದು ಗುರುತಿಸಲಾಗಿದೆ. ಈತ ಟಿಪಗಾಡ್ ದಳಂನ ಉಸ್ತುವಾರಿ ಎಂದು ನೀಲೋತ್ಪಲ್ ಮಾಹಿತಿ ನೀಡಿದ್ದಾರೆ.