ಇಂಡಿಯಾ ಮೈತ್ರಿಕೂಟಕ್ಕೆ ನೀಡುವ ಪ್ರತಿ ಮತವೂ ಜಮ್ಮು-ಕಾಶ್ಮೀರಕ್ಕೆ ಮತ್ತೆ ಸಮೃದ್ಧಿ ತರಲಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಶ್ರೀನಗರ: ಇಂಡಿಯಾ ಮೈತ್ರಿಕೂಟಕ್ಕೆ ನೀಡುವ ಪ್ರತಿ ಮತವೂ ಬಿಜೆಪಿ ಸೃಷ್ಟಿಸಿರುವ ಅನ್ಯಾಯದ ಚಕ್ರವ್ಯೂಹವನ್ನು ಭೇದಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ಸಮೃದ್ಧಿಯನ್ನು ತರುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ವದ ಎರಡನೆಯ ಹಂತದ ಮತದಾನ ಪ್ರಗತಿಯಲ್ಲಿರುವ ಬೆನ್ನಿಗೇ ರಾಹುಲ್ ಗಾಂಧಿ ಮೇಲಿನಂತೆ ಮನವಿ ಮಾಡಿದ್ದಾರೆ. ಎರಡನೆ ಹಂತದ ಮತದಾನದಲ್ಲಿ 26 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಜಮ್ಮು ಮತ್ತು ಕಾಶ್ಮೀರದ ಸಹೋದರ ಮತ್ತು ಸಹೋದರಿಯರೆ, ಇಂದು ಎರಡನೆ ಹಂತದ ಮತದಾನವಾಗಿದ್ದು, ನಿಮ್ಮ ಹಕ್ಕು ಮತ್ತು ಸಮೃದ್ಧಿಗಾಗಿ ದೊಡ್ಡ ಸಂಖ್ಯೆಯಲ್ಲಿ ಬಂದು, ಇಂಡಿಯಾ ಮೈತ್ರಿಕೂಟದ ಪರವಾಗಿ ಮತದಾನ ಮಾಡಿ” ಎಂದು ಮನವಿ ಮಾಡಿದ್ದಾರೆ.
“ಬಿಜೆಪಿಯು ನಿಮ್ಮ ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಳ್ಳುವ ಮೂಲಕ ನಿಮಗೆ ಅವಮಾನಿಸಿದೆ ಹಾಗೂ ನಿಮ್ಮ ಸಾಂವಿಧಾನಿಕ ಹಕ್ಕಿನೊಂದಿಗೆ ಆಟವಾಡಿದೆ” ಎಂದೂ ಅವರು ಆರೋಪಿಸಿದ್ದಾರೆ.
जम्मू-कश्मीर के मेरे भाइयों और बहनों, आज दूसरे चरण का मतदान है, बड़ी संख्या में निकल कर अपने हक़, खुशहाली और बरकत के लिए वोट करें - INDIA को वोट करें।
— Rahul Gandhi (@RahulGandhi) September 25, 2024
आपसे आपका statehood छीन कर भाजपा सरकार ने आपका अपमान और आपके संवैधानिक अधिकारों से खिलवाड़ किया है।
INDIA को दिया आपका एक-एक…