Fact-Check: ಮುಸ್ಲಿಂ ವಲಸಿಗರ ವಿರುದ್ಧ ಜರ್ಮನಿಯ ನರ್ಸ್ ಬರೆದಿದ್ದಾರೆನ್ನಲಾದ ವೈರಲ್ ಸಂದೇಶ ಸುಳ್ಳು
ಹೊಸ ದಿಲ್ಲಿ: ಜರ್ಮನಿಯ ನರ್ಸ್ ಒಬ್ಬರು ಬರೆದಿದ್ದಾರೆನ್ನಲಾದ ಮುಸ್ಲಿಂ ವಲಸಿಗರ ವಿರುದ್ಧದ ಸಂದೇಶವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ನಿರ್ದಿಷ್ಟವಾಗಿ ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿದೆ. ಮುಸ್ಲಿಂ ವಲಸಿಗರ ಕಾರಣಕ್ಕೆ ಜರ್ಮನಿಯ ಆಸ್ಪತ್ರೆಗಳಲ್ಲಿ ಸವಾಲಿನ ಹಾಗೂ ಅಸ್ಥಿರ ವೈದ್ಯಕೀಯ ಪರಿಸ್ಥಿತಿ ಇದೆ ಎಂದು ಆ ಸಂದೇಶದಲ್ಲಿ ಹೇಳಲಾಗಿತ್ತು.
ಈ ವೈರಲ್ ಸಂದೇಶವು ವಲಸಿಗರು, ನಿರ್ದಿಷ್ಟವಾಗಿ ಮುಸ್ಲಿಂ ವಲಸಿಗರ ಕುರಿತು ಸುಳ್ಳು ಮಾಹಿತಿ ಹೊಂದಿದೆ.
ವೈರಲ್ ಸಂದೇಶದಲ್ಲಿರುವುದೇನು?
ವಿಪರೀತ ವಲಸಿಗರ ಕಾರಣಕ್ಕೆ ಜರ್ಮನ್ ಆಸ್ಪತ್ರೆಗಳಲ್ಲಿ ಎದುರಾಗಿರುವ ತೊಂದರೆಗಳ ಕುರಿತು ನರ್ಸ್ ಒಬ್ಬರ ಅನುಭವವನ್ನು ವಿವರಿಸುತ್ತದೆ ಎಂಬ ಪ್ರತಿಪಾದನೆಯನ್ನುಳ್ಳ ವೈರಲ್ ಸಂದೇಶದ ಮುಖ್ಯಾಂಶಗಳು ಹೀಗಿವೆ:
► ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ದೊಡ್ಡ ಪ್ರಮಾಣದ ವಲಸಿಗರನ್ನು ಆರೋಗ್ಯ ಸೇವೆ ನೀಡಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
► ಮುಸ್ಲಿಮರು ಮಹಿಳಾ ವೈದ್ಯಕೀಯ ಸಿಬ್ಬಂದಿಗಳಿಂದ ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
► ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವಲಸಿಗರ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಸ್ಪತ್ರೆಗಳ ಬಳಿ ಪೊಲೀಸರು ಹಾಗೂ ಕೆ-9 ಘಟಕಗಳನ್ನು ನಿಯೋಜಿಸಲಾಗಿದೆ
► ಯೂರೋಪ್ ದೇಶಗಳಲ್ಲಿ ಸಾಮಾನ್ಯವಾಗಿ ಚಿಕಿತ್ಸೆ ನೀಡಲಾಗದ ಏಡ್ಸ್, ಸಿಫಿಲಿಸ್ ಹಾಗೂ ಇನ್ನಿತರ ಗಂಭೀರ ಸಮಸ್ಯೆಗಳ ಕಾಯಿಲೆಗಳನ್ನು ಹಲವಾರು ವಲಸಿಗರು ಹೊಂದಿದ್ದಾರೆ.
► ಆಸ್ಪತ್ರೆಗಳಲ್ಲಿ ಕ್ಷೋಭೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಿಫಾರಸು ಮಾಡಲಾದ ಚಿಕಿತ್ಸೆಗೆ ಪಾವತಿಸಲು ವಲಸಿಗರು ನಿರಾಕರಿಸುತ್ತಿದ್ದಾರೆ.
► ಈ ಸಂಗತಿಗಳನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮಗಳಿಗೆ ಅವಕಾಶ ನೀಡಲಾಗುತ್ತಿಲ್ಲ.
ಈ ಮೇಲಿನ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂತ್ಯಾಂಶವೇನು?:
ಈ ವೈರಲ್ ಸಂದೇಶದ ಜಾಡು ಹುಡುಕಿದಾದ ಈ ಸಂದೇಶವು ಸಂಪೂರ್ಣ ಸುಳ್ಳು ಎಂದು ಪತ್ತೆಯಾಯಿದೆ. ಈ ಸಂದೇಶವನ್ನು ಸಮರ್ಥಿಸುವಂಥ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.
ಈ ಸಂದೇಶದಲ್ಲಿ ಹೆಸರು, ದಿನಾಂಕಗಳು ಹಾಗೂ ಸ್ಥಳಗಳ ನಿರ್ದಿಷ್ಟ ವಿವರಗಳನ್ನು ಒದಗಿಸದೆ ಇರುವುದರಿಂದ ಅನುಮಾನಾಸ್ಪದವಾಗಿದೆ. ಅಲ್ಲದೇ ಈ ಸಂದೇಶದಲ್ಲಿ ಪರಿಶೀಲಿಸಬಲ್ಲ ಮಾಹಿತಿಗಳ ಕೊರತೆ ಇರುವುದರಿಂದ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.
ಇದೇ ಮಾದರಿಯ ಅಲ್ಪ ಸ್ವಲ್ಪ ವ್ಯತ್ಯಾಸ ಇರುವ ಮೆಸೇಜುಗಳು 2015ರಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.
ಈ ಸಂದೇಶವು ನಿರ್ದಿಷ್ಟವಾಗಿ ಮುಸ್ಲಿಂ ವಲಸಿಗರ ಕುರಿತು ನಕಾರಾತ್ಮಕ ಧೋರಣೆಯನ್ನು ಪ್ರಚಾರ ಮಾಡಲು ಸೃಷ್ಟಿಸಿದಂತೆ ಕಂಡು ಬಂದಿದೆ.