Fact Check: ವಿರಾಟ್ ಕೊಹ್ಲಿ ಜೊತೆಗೆ ಭಾರತೀಯ ಆಟಗಾರರಿಂದ ಹೋಳಿ ಹಬ್ಬ ಆಚರಣೆ ಎಂದು 2023ರ ವೀಡಿಯೊ ವೈರಲ್

Photo credit: newsmeter.in
Claim: ವಿರಾಟ್ ಕೊಹ್ಲಿ ಜೊತೆಗೆ ಟೀಮ್ ಇಂಡಿಯಾ ಆಟಗಾರರು ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ.
Fact: ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತರ ಆಟಗಾರರೊಂದಿಗೆ ಹೋಳಿ ಆಡುತ್ತಿರುವ ಈ ವೀಡಿಯೊ 2023 ರದ್ದಾಗಿದೆ.
ವಿರಾಟ್ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಕೆಲ ಆಟಗಾರರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಕೊಹ್ಲಿ ಜೊತೆ ರೋಹಿತ್ ಶರ್ಮಾ ಮತ್ತು ಶಬ್ಮನ್ ಗಿಲ್ ಬಸ್ನ ಒಳಗೆ ಹೋಳಿ ಹಬ್ಬದ ಬಣ್ಣಗಳಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊ ಭಾರತೀಯ ತಂಡದ ಇತ್ತೀಚಿನ ಹೋಳಿ ಆಚರಣೆಯ ದೃಶ್ಯಗಳಾಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 14, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ವಿರಾಟ್ ಕೊಹ್ಲಿ ಜೊತೆಗೆ ಹೋಳಿ ಹಬ್ಬದ ಬಣ್ಣ ಆಡುತ್ತಿರುವ ನಮ್ಮ ದೇಶದ ಕ್ರಿಕೆಟ್ ತಂಡದ ಆಟಗಾರರು’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2023 ರ ವೀಡಿಯೊ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಬಸ್ನಲ್ಲಿ ಹೋಳಿ ಆಚರಿಸಿದ ಸಂದರ್ಭದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ 2023 ರಲ್ಲಿ ಹಲವಾರು ಸುದ್ದಿ ವೆಬ್ಸೈಟ್ಗಳಲ್ಲಿ ಈ ವೀಡಿಯೊಗೆ ಸಂಬಂಧಿಸಿದ ಸುದ್ದಿಗಳನ್ನು ನಾವು ಕಂಡುಕೊಂಡಿದ್ದೇವೆ.
ಮಾರ್ಚ್ 7, 2023 ರಂದು ಇಂಡಿಯಾ ಟಿವಿ ಪ್ರಕಟಿಸಿದ ಸುದ್ದಿಯ ಪ್ರಕಾರ, ‘‘ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಇಡೀ ಭಾರತ ತಂಡ ಹೋಳಿ ಆಚರಿಸಿದೆ. ಭಾರತದ ತಾರೆಯರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಹ್ಯಾಪಿ ಮೂಡ್ನಲ್ಲಿ ಕಾಣಿಸಿಕೊಂಡರು. ಶುಭ್ಮನ್ ಗಿಲ್ ತಂಡದ ಬಸ್ಸಿನೊಳಗೆ ಹೋಳಿ ಆಚರಣೆಯ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ’’ ಎಂಬ ಮಾಹಿತಿ ಇದೆ.
ಹೀಗಾಗಿ ನಾವು ಶುಭ್ಮನ್ ಗಿಲ್ ಅವರ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೊವನ್ನು ಹುಡುಕಿದ್ದೇವೆ. ಮಾರ್ಚ್ 7, 2023 ರಂದು ಗಿಲ್ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ನಮಗೆ ಸಿಕ್ಕಿದೆ. ‘‘ಭಾರತೀಯ ಕ್ರಿಕೆಟ್ ತಂಡದಿಂದ ಹೋಲಿ ಹಬ್ಬದ ಶುಭಾಶಯಗಳು’’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಕೊಹ್ಲಿ ಮತ್ತು ಇತರ ಆಟಗಾರರು ಹೋಳಿ ಆಡುತ್ತಿರುವ ಇದೇ ವೈರಲ್ ವೀಡಿಯೊವನ್ನು ಹಲವು ಮಾಧ್ಯಮಗಳು 2023 ರ ಮಾರ್ಚ್ನಲ್ಲಿ ಹಂಚಿಕೊಂಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತರ ಆಟಗಾರರೊಂದಿಗೆ ಹೋಳಿ ಆಡುತ್ತಿರುವ ಈ ವೀಡಿಯೊ 2023 ರದ್ದಾಗಿದೆ. 2025ರ ಹೋಳಿ ಹಬ್ಬಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.
Claim Review:ವಿರಾಟ್ ಕೊಹ್ಲಿ ಜೊತೆಗೆ ಟೀಮ್ ಇಂಡಿಯಾ ಆಟಗಾರರು ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತರ ಆಟಗಾರರೊಂದಿಗೆ ಹೋಳಿ ಆಡುತ್ತಿರುವ ಈ ವೀಡಿಯೊ 2023 ರದ್ದಾಗಿದೆ.
ಈ ಲೇಖನವನ್ನು ಮೊದಲು 'newsmeter.in' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.