ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಂಗಾಪುರ್ ಏರ್ಲೈನ್ಸ್ ನ ನಕಲಿ ಪೈಲಟ್ ನ ಬಂಧನ!
PC : X \ @SGinIndia
ಹೊಸದಿಲ್ಲಿ : ಸಿಂಗಾಪುರ್ ಏರ್ಲೈನ್ಸ್ ನ ಪೈಲೆಟ್ ನಂತೆಯೇ ಸಮವಸ್ತ್ರ ಧರಿಸಿ, ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು CISF ಬಂಧಿಸಿದೆ ಎಂದು simplyflying.com ವರದಿ ಮಾಡಿದೆ.
ಎ.25ರಂದು ಈ ಘಟನೆ ವರದಿಯಾಗಿದ್ದು, ಟರ್ಮಿನಲ್ ಎರಡು ಮತ್ತು ಮೂರನ್ನು ಸಂಪರ್ಕಿಸುವ ವಿಮಾನ ನಿಲ್ದಾಣದ ಮೆಟ್ರೋ ಸ್ಕೈ-ವಾಕ್ ಪ್ರದೇಶದ ಬಳಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಕಲಿ ಪೈಲಟ್ ನನ್ನು ಬಂಧಿಸಿದೆ. ಆರೋಪಿಯನ್ನು ಉತ್ತರ ಪ್ರದೇಶದ ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಅಪ್ಲಿಕೇಶನ್ ಬಳಸಿ ಆತ ಸಿಂಗಾಪುರ್ ಏರ್ಲೈನ್ಸ್ ನ ಪೈಲೆಟ್ ಐಡಿ ಕಾರ್ಡ್ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಪೈಲೆಟ್ ಅರ್ಹತೆ ಪಡೆಯದಿದ್ದರೂ, ತನ್ನ ಕುಟುಂಬದವರಿಗೆ ತಾನು ಸಿಂಗಾಪುರ್ ಏರ್ ಲೈನ್ಸ್ ನಲ್ಲಿ ಪೈಲೆಟ್ ಎಂದು ಬಿಂಬಿಸಿಕೊಳ್ಳಲು ಸಂಗೀತ್ ಸಿಂಗ್ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ 2020ರಲ್ಲಿ 12 ತಿಂಗಳ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಕೋರ್ಸನ್ನು ಸಂದೀಪ್ ಸಿಂಗ್ ಪೂರ್ಣಗೊಳಿಸಿದ್ದ ಎನ್ನಲಾಗಿದೆ.
ಸಂದೀಪ್ ಸಿಂಗ್ ಮೇಲೆ ನಿಗಾ ಇರಿಸಿದ್ದ CISF, ವಿಮಾನ ನಿಲ್ದಾಣದ ಒಂದೇ ದಾರಿಯಲ್ಲಿ ಹಲವು ಬಾರಿ ಅಡ್ಡಾಡುವುದನ್ನು ಗಮನಿಸಿ, ತೀವ್ರ ವಿಚಾರಣೆಗೊಳಪಡಿಸಿದಾಗ ನಕಲಿ ಪೈಲೆಟ್ ವಿಚಾರ ಹೊರಬಂದಿದೆ. ಆರೋಪಿಯ ಮೇಲೆ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ 420 (ಮೋಸ ಮತ್ತು ಅಪ್ರಾಮಾಣಿಕತೆ), 468 (ಮೋಸ ಮಾಡುವ ಉದ್ದೇಶಕ್ಕಾಗಿ ನಕಲಿ ದಾಖಲೆ ಬಳಕೆ), 471(ನಕಲಿ ದಾಖಲೆಯನ್ನು ಅಸಲಿಯಾಗಿ ಬಳಸುವುದು) ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಭದ್ರತಾ ಪಡೆಗಳು ಪ್ರಶ್ನಿಸಿದಾಗ, ಅನುಮಾನ ಬಾರದಿರಲು ಸಂದೀಪ್ ಸಿಂಗ್ ಸಿಂಗಾಪುರ್ ಏರ್ ಲೈನ್ಸ್ ನ ಐಡಿ ಕಾರ್ಡ್ ನೀಡಿದ್ದಾನೆ. ಸಿಐಎಸ್ಎಫ್ ಸಿಬ್ಬಂದಿಗೆ ಕೂಡಲೇ ಅದು ನಕಲಿ ಎಂದು ತಿಳಿದು, ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿ ಸಂದೀಪ್ ಸಿಂಗ್ ದ್ವಾರಕಾದ ಮಳಿಗೆಯೊಂದರಿಂದ ಸಿಂಗಾಪುರ್ ಏರ್ ಲೈನ್ನ ಅಧಿಕೃತ ಸಮವಸ್ತ್ರವನ್ನು ಖದೀರಿಸಿರುವುದಾಗಿ ಹೇಳಿದ್ದಾನೆ ಎಂದು ವರದಿಯಾಗಿದೆ.
UP man caught in IGI Airport posing as Singapore Airlines Pilot. So glad he got caught. HC Wong#SingaporeAirlines #DelhiAirport #CISF
— Singapore in India (@SGinIndia) April 26, 2024
(:@ndtv) pic.twitter.com/AL48GblzRh