ದೇಶದ ಮೊದಲ ಶಿಕ್ಷಣ ಸಮೀಕ್ಷೆ ನ. 3 ರಂದು ; 1.10 ಕೋಟಿ ವಿದ್ಯಾರ್ಥಿಗಳು ಭಾಗಿ
Photo: PTI
ಹೊಸದಿಲ್ಲಿ: ದೇಶದ ಮೊದಲ ಶಿಕ್ಷಣ ಸಮೀಕ್ಷೆಯು ನವೆಂಬರ್ 3ರಂದು ರಾಷ್ಟ್ರೀಯ ಶೈಕ್ಷಣಿಕ ಮೌಲ್ಯಮಾಪನ ನಿಯಂತ್ರಕ ಸಂಸ್ಥೆ PARAKH ನಡೆಸಲಿದ್ದು ದೇಶಾದ್ಯಂತದ 1.10 ಕೋಟಿ ಮಕ್ಕಳು ಈ ಸಮೀಕ್ಷೆಯಲ್ಲಿ ಒಳಗೊಳ್ಳಲಿದ್ದಾರೆ.
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಶಿಕ್ಷಣದಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕ್ಷೇತ್ರಗಳನ್ನು ಗುರುತಿಸುವ ಉದ್ದೇಶವನ್ನು ಈ ಸಮೀಕ್ಷೆ ಹೊಂದಿದ್ದು ಬ್ಲಾಕ್ ಹಂತದ ತನಕದ ವಿದ್ಯಾರ್ಥಿಗಳು ಈ ಸಮೀಕ್ಷೆಯ ಭಾಗವಾಗಲಿದ್ದಾರೆ. ಶಿಕ್ಷಣ ಸಚಿವಾಲಯದ ಜಿಲ್ಲಾ ಮಟ್ಟದ ವಾರ್ಷಿಕ ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ಗೆ ಮುಂಚಿತವಾಗಿ ಈ ಸಮೀಕ್ಷೆ ನಡೆಯುತ್ತಿದೆ.
ನವೆಂಬರ್ 3ರಂದು ಸಮೀಕ್ಷೆ ನಡೆಸಲಿರುವ PARAKH ಎಂಬುದು NCERTE ಅಧೀನಕ್ಕೊಳಪಟ್ಟ ಸಂಸ್ಥೆಯಾಗಿದೆ.
ಈ ಸ್ಪರ್ಧಾತ್ಮಕತೆ ಆಧಾರಿತ ಮೌಲ್ಯಮಾಪನ ವ್ಯವಸ್ಥೆಯು, ವಿದ್ಯಾರ್ಥಿಗಳಿಗೆ ಏನು ಗೊತ್ತು ಎಂಬುದನ್ನು ಮಾತ್ರ ಪರಾಮರ್ಶಿಸದೆ ಅವರು ಆ ಜ್ಞಾನವನ್ನು ನೈಜ-ಜಗತ್ತಿನ ಸನ್ನಿವೇಶಗಳಿಗೆ ಎಷ್ಟು ಚೆನ್ನಾಗಿ ಅಳವಡಿಸಿಕೊಳ್ಳಬಲ್ಲರು ಎಂಬ ಕುರಿತೂ ತಿಳಿಯಲು ಪ್ರಯತ್ನಿಸಲಿದೆ ಎಂದು PARAKH ಮುಖ್ಯಸ್ಥೆ ಇಂದ್ರಾಣಿ ಭದೂರಿ ಹೇಳಿದ್ದಾರೆ.