ದಿಲ್ಲಿ: ಪ್ರತಿಕೂಲ ಹವಾಮಾನ 22 ರೈಲುಗಳ ಸಂಚಾರ ವಿಳಂಬ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪ್ರತಿಕೂಲ ಹವಾಮಾನದ ಕಾರಣದಿಂದ ದಿಲ್ಲಿಯತ್ತ ಸಂಚರಿಸುತ್ತಿದ್ದ 22 ರೈಲುಗಳು ರವಿವಾರ ವಿಳಂಬವಾಗಿ ಸಂಚರಿಸಿವೆ.
ಹೊಗೆ ತುಂಬಿದ ವಾತಾವರಣ ದಿಲ್ಲಿಯಲ್ಲಿ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಕಂಡುಬಂದಿದೆ. ಹೊಗೆಯ ವಾತಾವರಣದಿಂದಾಗಿ ದಿಲ್ಲಿಯತ್ತ ಸಂಚರಿಸುತ್ತಿದ್ದ ಅಜ್ಮೀರ್-ಕಾಟ್ರಾ ಪೂಜಾ ಎಕ್ಸ್ ಪ್ರೆಸ್, ಜಮ್ಮುತಾವಿ ಅಜ್ಮೀರ್ ಎಕ್ಸ್ ಪ್ರೆಸ್ ಹಾಗೂ ಫಿರೋಝ್ಪುರ-ಸಿಯೋನಿ ಎಕ್ಸ್ ಪ್ರೆಸ್ ನಂತಹ ರೈಲುಗಳ 3.30 ಗಂಟೆಗೂ ಅಧಿಕ ಗಂಟೆ ವಿಳಂಬವಾಗಿ ಸಂಚರಿಸಿವೆ.
ಇದಲ್ಲದೆ, ಪುರಿ-ಹೊಸದಿಲ್ಲಿ ಪುರುಷೋತ್ತಮ ಎಕ್ಸ್ ಪ್ರೆಸ್, ಕಾನ್ಪುರ-ಹೊಸದಿಲ್ಲಿ ಶ್ರಮಶಕ್ತಿ, ದಿಬ್ರುಗಡ-ಹೊಸದಿಲ್ಲಿ ರಾಜಧಾನಿ, ಬೆಂಗಳೂರು-ನಿಜಾಮುದ್ದೀನ್, ರಾಜೇಂದ್ರನಗರ್-ಹೊಸದಿಲ್ಲಿ ರಾಜಧಾನಿ ಹಾಗೂ ಸಹರ್ಸಾ-ಹೊಸದಿಲ್ಲಿ ವೈಶಾಲಿ ಎಕ್ಸ್ ಪ್ರೆಸ್ 1ರಿಂದ 1.30 ಗಂಟೆ ವಿಳಂಬವಾಗಿ ಸಂಚರಿಸಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಪ್ರಾಥಮಿಕ ಶಾಲೆಗಳಿಗೆ ಚಳಿಗಾಲದ ರಜೆ ಜನವರಿ 12ರ ವರೆಗೆ ವಿಸ್ತರಣೆ
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಚಳಿಗಾಲದ ರಜೆಯನ್ನು ದಿಲ್ಲಿ ಸರಕಾರ ಜನವರಿ 12ರ ವರೆಗೆ ವಿಸ್ತರಿಸಿದೆ ಎಂದು ರಾಜ್ಯ ಶಿಕ್ಷಣ ಸಚಿವೆ ಆತಿಶಿ ಅವರು ರವಿವಾರ ತಿಳಿಸಿದ್ದಾರೆ. ಆತಿಷಿ ಅವರು ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ. ಎಲ್ಲಾ ಶಾಲೆಗಳಿಗೆ ಚಳಿಗಾಲದ ರಜೆಯನ್ನು ಜನವರಿ 10ರ ವರೆಗೆ ವಿಸ್ತರಿಸಿದ ತನ್ನ ಈ ಹಿಂದಿನ ಆದೇಶವನ್ನು ಶಿಕ್ಷಣ ನಿರ್ದೇಶನಾಲಯ ಹಿಂಪಡೆದ ಗಂಟೆಗಳ ಬಳಿಕ ಅವರ ಈ ಆದೇಶ ಹೊರಬಿದ್ದಿದೆ.