ಪುಣೆ: ಮಾಜಿ ಸಂಸದನ ಪುತ್ರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ವಿಕಾಸ್ ಕಿಶನ್ ರಾವ್ ಬಂಖೇಲೆ (Photo credit: loksatta.com)
ಪುಣೆ: ಮಾಜಿ ಲೋಕಸಭಾ ಸದಸ್ಯರೊಬ್ಬರ ಪುತ್ರನು ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುರುವಾರ ಪುಣೆ ಜಿಲ್ಲೆಯ ಅಂಬೇಗಾಂವ್ ತಾಲ್ಲೂಕಿನ ಮಂಚಾರ್ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ವಿಕಾಸ್ ಕಿಶನ್ ರಾವ್ ಬಂಖೇಲೆ (42) ಎಂದು ಗುರುತಿಸಲಾಗಿದ್ದು, ಅವರು ಕುತ್ತಿಗೆಗೆ ತಂತಿಯನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಈ ಘಟನೆಗೆ ಕಾರಣ ಏನು ಎಂದು ಇದುವರೆಗೆ ತಿಳಿದು ಬಂದಿಲ್ಲ. ತನಿಖಾ ವಿಧಾನಗಳ ಪ್ರಕಾರ, ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪುಣೆ ಗ್ರಾಮೀಣ ಪೊಲೀಸ್ ವ್ಯಾಪ್ತಿಯ ಮಂಚಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಕಾಸ್ ಬಂಖೇಲೆ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ದೃಢಪಡಿಸಿಕೊಳ್ಳಲು ತನಿಖೆಯು ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ತಂದೆ ಕಿಶನ್ ರಾವ್ ಬಂಖೇಲೆ ಹಿರಿಯ ರಾಜಕಾರಣಿಯಾಗಿದ್ದು, 1988ರಲ್ಲಿ ಪುಣೆ ಜಿಲ್ಲೆಯ ಖೇಡ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಅವರು ನಿಧನರಾಗಿದ್ದರು.