ಹರ್ಯಾಣದಲ್ಲಿನ ಬಿಜೆಪಿ ಮುನ್ನಡೆ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ: ಕಾಂಗ್ರೆಸ್ ನಾಯಕ ಶಶಿ ತರೂರ್
ಶಶಿ ತರೂರ್ (Photo: PTI)
ತಿರುವನಂತಪುರಂ: ಹರ್ಯಾಣದಲ್ಲಿನ ಬಿಜೆಪಿ ಮುನ್ನಡೆಯಿಂದ ನಿಜಕ್ಕೂ ಅಚ್ಚರಿಯುಂಟಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀೂರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಕುರಿತು ಪ್ರತಿಕ್ರಿಯಿಸಿದ ಅವರು, “ಈಗಲೇ ಫಲಿತಾಂಶದ ಕುರಿತು ಯಾವುದೇ ನಿರ್ಧಾರಕ್ಕೆ ಬರಬೇಡಿ. ನಾವು ಕಾದು ನೋಡಬೇಕಿದೆ. ಅಂತಿಮ ನಿರ್ಣಯ ಕೈಗೊಳ್ಳಲು ಇದು ತೀರಾ ಅವಸರದ್ದಾಗುತ್ತದೆ” ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.
ಹರ್ಯಾಣದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ ಎಂದು ಹೇಳಿದ ತರೂರ್, ಇದು ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ ಎಂದಿದ್ದಾರೆ.
“ಇದು ನಿಜಕ್ಕೂ ಅಚ್ಚರಿದಾಯಕವಾಗಿದೆ. ಚುನಾವಣೋತ್ತರ ಸಮೀಕ್ಷಾ ಸಂಸ್ಥೆಗಳು ಸದ್ಯಕ್ಕೆ ಮುಜುಗರಕ್ಕೀಡಾಗಿರಬಹುದು” ಎಂದೂ ಅವರು ಹೇಳಿದ್ದಾರೆ.
Next Story