ಅಸ್ಸಾಂನ 6 ಕಲೆಗಳಿಗೆ ಭೌಗೋಳಿಕ ಮಾನ್ಯತೆ : ಹಿಮಾಂತ ಬಿಸ್ವಾ ಶರ್ಮಾ
ಹಿಮಾಂತ ಬಿಸ್ವಾ ಶರ್ಮಾ | Photo: PTI
ಗುವಾಹಟಿ : ಅಸ್ಸಾಂನ 6 ಸಾಂಪ್ರದಾಯಿಕ ಉತ್ಪನ್ನಗಳು ಹಾಗೂ ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ (ಜಿಐ) ದೊರಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ರವಿವಾರ ತಿಳಿಸಿದ್ದಾರೆ.
ಈ ಉತ್ಪನ್ನಗಳು ಸುಮಾರು ಒಂದು ಲಕ್ಷ ಜನರಿಗೆ ನೇರ ಜೀವನೋಪಾಯವಾಗಿವೆ ಎಂದು ಅವರು ತಿಳಿಸಿದ್ದಾರೆ.
ಇದು ರಾಜ್ಯದ ಪರಂಪರೆಗೆ ಅತಿ ದೊಡ್ಡ ಜಯ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಹಿಮಾಂತ ಬಿಸ್ವಾ ಶರ್ಮಾ, ನಬಾರ್ಡ್, ಆರ್ಒ ಗುವಾಹಟಿ ಹಾಗೂ ಜಿಐ ತಜ್ಞ, ಪದ್ಮಶ್ರೀ ಪುರಸ್ಕೃತ ರಜನಿಕಾಂತ್ ಅವರ ಬೆಂಬಲದೊಂದಿಗೆ ರಾಜ್ಯದ ಸಾಂಪ್ರದಾಯಿಕ ಕಲೆಗಳಿಗೆ ಜಿಐ ಗೌರವ ದೊರಕಿದೆ ಎಂದು ಹೇಳಿದ್ದಾರೆ.
ಇವುಗಳು ರಾಜ್ಯದ ಬಿಹು ಡೋಲ್ (ವಾದ್ಯ), ಜಾಪಿ (ಸಾಂಪ್ರದಾಯಿಕ ಟೋಪಿ), ಸರ್ಥೆಬಾರಿ ಲೋಹದ ಕರಕುಶಲ ವಸ್ತುವಿನಂತಹ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಒಳಗೊಂಡಿವೆ. ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಈ ವಸ್ತುಗಳು 1 ಲಕ್ಷ ಜನರ ಜೀವನಾಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಉತ್ಪನ್ನಗಳಿಗೆ 2022 ಅಂತ್ಯದಲ್ಲಿ ಭೌಗೋಳಿಕ ಮಾನ್ಯತೆಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಶನಿವಾರ ಭೌಗೋಳಿಕ ಮಾನ್ಯತೆ ದೊರಕಿದೆ.