ರಾಜಸ್ಥಾನ: ಹಳಿ ತಪ್ಪಿದ ಗೂಡ್ಸ್ ರೈಲು
Photo: ANI
ಅಲ್ವಾರ್ (ರಾಜಸ್ಥಾನ): ಸರಕು ಸಾಗಣೆ ರೈಲಿನ ವ್ಯಾಗನ್ಗಳು ಹಳಿ ರಪ್ಪಿರುವ ಘಟನೆ ರವಿವಾರ ಮುಂಜಾನೆ ರಾಜಸ್ಥಾನದ ಅಲ್ವಾರ್ ಯಾರ್ಡ್ನಲ್ಲಿ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. "ಈ ಘಟನೆಯು ಯಾರ್ಡ್ನ ಒಂದು ಬದಿಯಲ್ಲಿ ನಡೆದಿರುವುದರಿಂದ ದಿಲ್ಲಿ-ಅಲ್ವಾರ್ ಮಾರ್ಗದ ರೈಲು ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ" ಎಂದು ವಾಯುವ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಈ ಘಟನೆಯು ಮುಂಜಾನೆ 2.30ರ ವೇಳೆಗೆ ಸಂಭವಿಸಿದೆ ಎಂದು ಹೇಳಲಾಗಿದೆ.
"ಈ ಘಟನೆಯಿಂದ ಅಲ್ವಾರ್-ಮಥುರ ಮಾರ್ಗದಲ್ಲಿ ವ್ಯತ್ಯಯವಾಯಿತಾದರೂ, ಆ ಸಂದರ್ಭದಲ್ಲಿ ಯಾವುದೇ ಪ್ರಯಾಣಿಕರ ಅಥವಾ ಸರಕು ಸಾಗಣೆ ರೈಲಿನ ಸಂಚಾರವಿಲ್ಲದೆ ಇದ್ದುದರಿಂದ ರೈಲುಗಳ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮವಾಗಲಿಲ್ಲ" ಎಂದು ಅವರು ಹೇಳಿದ್ದಾರೆ.
Next Story