ನನ್ನ ಪೋಷಕರಿಗೆ ಕನಸಿನ ಕಾರು ಉಡುಗೊರೆ ನೀಡಬೇಕು: ಡಬ್ಲ್ಯೂಪಿಎಲ್ ಅಚ್ಚರಿ ಕೋಟ್ಯಧಿಪತಿ ವೃಂದಾ ದಿನೇಶ್ ರ ಮೊದಲ ಗುರಿ
ವೃಂದಾ ದಿನೇಶ್ | Photo: NDTV
ಹೊಸ ದಿಲ್ಲಿ: ಡಿಬ್ಲ್ಯೂಪಿಎಲ್ ನಲ್ಲಿ ಭಾರಿ ಮೊತ್ತವಾದ 1.30 ಕೋಟಿಗೆ ಹರಾಜಾಗಿದ್ದರೂ,
ಅವರಿಗೆ ತಮ್ಮ ತಾಯಿಗೆ ಕರೆ ಮಾಡಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಕಾರಣ, ತನ್ನ ತಾಯಿ ಈ ಸುದ್ದಿಯಿಂದ ಸಮ ಪ್ರಮಾಣದ ಬೀಗುವಿಕೆ ಹಾಗೂ ಭಾವುಕತೆಯನ್ನು ಅನುಭವಿಸಬಹುದು ಎಂದು. ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಗುಜರಾತ್ ಜೈಂಟ್ಸ್ ಪರ ಕುಶ್ವಿ ಗೌತಮ್ ರೂ. 2 ಕೋಟಿಗೆ ಹರಾಜಾದ ನಂತರದ ಸ್ಥಾನದಲ್ಲಿ ವೃಂದಾ ದಿನೇಶ್ ಇದ್ದು, ಯುಪಿ ವಾರಿಯರ್ಸ್ ಪರ ದಾಖಲೆಯ ರೂ. 1.30 ಕೋಟಿಗೆ ಹರಾಜಾಗಿದ್ದಾರೆ ಈ ಕರ್ನಾಟಕದ ಬ್ಯಾಟರ್. ವೃಂದಾ ದಿನೇಶ್ ಅವರಿಗೆ ತಮ್ಮ ಪೋಷಕರ ಕುರಿತು ಅದೆಷ್ಟು ಪ್ರೀತಿ ಇದೆಯೆಂದರೆ, ತಾನೇನಾದರೂ ಬೆಂಗಳೂರಿನಲ್ಲಿರುವ ತನ್ನ ತಾಯಿಗೆ ವೀಡಿಯೊ ಕರೆ ಮಾಡಿದರೆ, ಆಕೆ ತನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ರಾಯಪುರದಲ್ಲಿರುವ ವೃಂದಾ ದಿನೇಶ್ ಇದುವರೆಗೂ ಆ ಕೆಲಸವನ್ನು ಮಾಡಲೇ ಹೋಗಿಲ್ಲ ಎಂದು ndtv.com ವರದಿ ಮಾಡಿದೆ.
ಶನಿವಾರ ಯುಪಿ ವಾರಿಯರ್ಸ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೃಂದಾ ದಿನೇಶ್, “ಆಕೆ ಕಂಬನಿಯಾಗಿರುತ್ತಾಳೆ ಎಂದು ನನಗನ್ನಿಸುತ್ತಿದೆ. ನಾನು ಆ ಕಂಬನಿಯನ್ನು ನೋಡಬೇಕಾಗುತ್ತದೆ ಎಂದು ನಾನು ಈವರೆಗೆ ವೀಡಿಯೊ ಕರೆ ಮಾಡಿಲ್ಲ. ನಾನು ಕೇವಲ ಸಾಮಾನ್ಯ ಕರೆ ಮಾಡಿದೆ ಹಾಗೂ ಆ ಕರೆ ಗದ್ಗದಿತವಾಗಿತ್ತು” ಎಂದು ಹೇಳಿದ್ದಾರೆ.
“ಅವರು ನಿಜಕ್ಕೂ ಬೀಗುತ್ತಿರುತ್ತಾರೆ ಎಂದು ನನಗೆ ತಿಳಿದಿದೆ. ಅವರು ನನಗಾಗಿ ತುಂಬಾ ಸಂತೋಷಗೊಂಡಿರುತ್ತಾರೆ. ಮತ್ತು ಅವರಿಗೆ ನಾನು ಹೆಮ್ಮೆ ಮೂಡಿಸಬೇಕಿದೆ. ನನ್ನ ಪೋಷಕರು ಯಾವಾಗಲೂ ಕನಸುತ್ತಿದ್ದ ಕಾರನ್ನು ಅವರಿಗೆ ಉಡುಗೊರೆಯಾಗಿ ನೀಡುತ್ತೇನೆ. ಅದು ನನ್ನ ಮೊಟ್ಟಮೊದಲ ಗುರಿಯಾಗಿದ್ದು, ನಂತರ ಏನಾಗುತ್ತದೊ ನೋಡೋಣ” ಎಂದು 23 ವರ್ಷದೊಳಗಿನವರ ಟಿ-20 ಟ್ರೋಫಿಗಾಗಿ ರಾಯಪುರದಲ್ಲಿ ಸಿದ್ಧತೆ ನಡೆಸುತ್ತಿರುವ ವೃಂದಾ ದಿನೇಶ್ ಹೇಳಿದ್ದಾರೆ.
ತಂಡದ ನಾಯಕಿ ಅಲಿಸಾ ಹೀಲಿಯೊಂದಿಗೆ ನಾನು ಬ್ಯಾಟಿಂಗ್ ಅನ್ನು ಆರಂಭಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ ಎಂದೂ ವೃಂದಾ ಬಹಿರಂಗಗೊಳಿಸಿದ್ದಾರೆ.
ನನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಗುಪ್ತ ಬಯಕೆಯಿತ್ತು ಎಂಬುದನ್ನು ಒಪ್ಪಿಕೊಂಡಿರುವ ವೃಂದಾ ದಿನೇಶ್, ಯುಪಿ ವಾರಿಯರ್ಸ್ ನನ್ನನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅಷ್ಟೇನೂ ಸಂತೋಷವಾಗಿಲ್ಲ ಎಂದೂ ಬಹಿರಂಗಗೊಳಿಸಿದ್ದಾರೆ.
“ಯಾಕೆಂದರೆ, ನಾನು ಸ್ಥಳೀಯಳು ಹಾಗೂ ಬೆಂಗಳೂರಿನವಳಾಗಿದ್ದು, ನಾನು ಯಾವಾಗಲೂ ಆರ್ಸಿಬಿಯನ್ನು ಇಷ್ಟಪಟ್ಟಿದ್ದೇನೆ. ಆದರೆ, ನನ್ನ ದಾರಿಯಲ್ಲಿ ಏನೆಲ್ಲ ಬರುತ್ತದೊ ಅದಕ್ಕೆಲ್ಲ ನಾನು ಸಿದ್ಧವಾಗಿದ್ದೆ. ನನ್ನನ್ನು ಆಯ್ಕೆ ಮಾಡಿಕೊಂಡಿರುವ ಯಾವುದೇ ತಂಡಕ್ಕಾದರೂ ನನ್ನ ಅತ್ಯುತ್ತಮವನ್ನು ನೀಡಲು ಬಯಸುತ್ತೇನೆ. ಈಗ ಯುಪಿ ವಾರಿಯರ್ಸ್ ನನ್ನನ್ನು ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಡಬ್ಲ್ಯೂಪಿಎಲ್ ಅಲ್ಲಿ ಗೆಲುವು ಸಾಧಿಸಲು ನಾನು ನನ್ನ ಎಲ್ಲ ಸಾಮರ್ಥ್ಯವನ್ನೂ ನೀಡಲು ಉತ್ಸುಕಳಾಗಿದ್ದೇನೆ” ಎಂದು ವೃಂದಾ ದಿನೇಶ್ ಹೇಳಿಕೊಂಡಿದ್ದಾರೆ.