ಸಂಸತ್ ಬಿಕ್ಕಟ್ಟು ಅಂತ್ಯಗೊಳಿಸಲು ಒಪ್ಪಿಕೊಂಡ ಸರಕಾರ, ಪ್ರತಿಪಕ್ಷಗಳು
ಸಂವಿಧಾನದ ಕುರಿತು ಚರ್ಚೆಗೆ ಸರಕಾರದ ಒಪ್ಪಿಗೆ

PC : PTI
ಹೊಸದಿಲ್ಲಿ : ಸಂಸತ್ತಿನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಅಂತ್ಯಹಾಡಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳು ಸೋಮವಾರ ಒಪ್ಪಿಕೊಂಡಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಲೋಕಸಭೆ ಮತ್ತು ರಾಜ್ಯಸಭೆ ಮಂಗಳವಾರದಿಂದ ಸುಗಮವಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರು ವಿವಿಧ ಪಕ್ಷಗಳ ಸದನ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಬಿಕ್ಕಟ್ಟು ಬಗೆಹರಿದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಪ್ರತಿಪಕ್ಷ ನಾಯಕರೂ ಸಂಸತ್ತು ಮಂಗಳವಾರದಿಂದ ಸುಗಮವಾಗಿ ಕಾರ್ಯ ನಿರ್ವಹಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಲೋಕಸಭೆ ಡಿ.13 ಮತ್ತು 14ರಂದು ಹಾಗೂ ರಾಜ್ಯಸಭೆ ಡಿ.17 ಮತ್ತು 18ರಂದು ಸಂವಿಧಾನದ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳಲಿವೆ ಎಂದು ರಿಜಿಜು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಪಕ್ಷಗಳು ಸಂವಿಧಾನ ಸಭೆಯಿಂದ ಸಂವಿಧಾನ ಅಂಗೀಕಾರದ 75ನೇ ವರ್ಷಾಚರಣೆಯ ಅಂಗವಾಗಿ ಉಭಯ ಸದನಗಳಲ್ಲಿ ಚರ್ಚೆಗಾಗಿ ಆಗ್ರಹಿಸಿದ್ದವು.
ಲಂಚ ಮತ್ತು ವಂಚನೆ ಆರೋಪಗಳಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ ಅದಾನಿ ಮತ್ತು ಕಂಪನಿಯ ಇತರ ಅಧಿಕಾರಿಗಳ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್ಗಳ ದೋಷಾರೋಪ ವಿಷಯವನ್ನು ಸಂಸತ್ತಿನಲ್ಲಿ ಎತ್ತಲು ಕಾಂಗ್ರೆಸ್ ಪಟ್ಟು ಹಿಡಿದಿದೆ. ಇದರೊಂದಿಗೆ ಸಂಭಲ್ ಹಿಂಸಾಚಾರ ಮತ್ತು ಮಣಿಪುರ ಅಶಾಂತಿಯಂತಹ ವಿಷಯಗಳ ಕುರಿತು ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗಳೂ ಸೇರಿಕೊಳ್ಳುವುದರೊಂದಿಗೆ ನ.25ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಂಡಾಗಿನಿಂದ ಉಭಯ ಸದನಗಳು ನಿರಂತರ ಮುಂದೂಡಿಕೆಗಳಿಗೆ ಸಾಕ್ಷಿಯಾಗಿವೆ.
ಆದರೆ ಇತರ ಕೆಲವು ಪ್ರತಿಪಕ್ಷಗಳು,ವಿಶೇಷವಾಗಿ ಟಿಎಂಸಿ,ಅದಾನಿ ವಿವಾದಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ. ನಿರುದ್ಯೋಗ,ಬೆಲೆ ಏರಿಕೆ ಮತ್ತು ನಿಧಿ ಹಂಚಿಕೆಯಲ್ಲಿ ಪ್ರತಿಪಕ್ಷ ಆಡಳಿತದ ರಾಜ್ಯಗಳಿಗೆ ನಿಧಿ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಸತ್ತು ಚರ್ಚೆ ನಡೆಸಬೇಕು ಎಂದು ಅವು ಬಯಸಿವೆ.
ಅಧಿವೇಶನ ಸಂದರ್ಭದಲ್ಲಿ ಇಂಡಿಯಾ ಮೈತ್ರಿಕೂಟದ ಜಂಟಿ ಕಾರ್ಯತಂತ್ರವನ್ನು ರೂಪಿಸಲು ಪ್ರತಿಪಕ್ಷಗಳ ಸಭೆಗಳಿಗೆ ಟಿಎಂಸಿ ಗೈರುಹಾಜರಾಗಿತ್ತು.
ಕಾಂಗ್ರೆಸ್ನ ಕಾರ್ಯಸೂಚಿಗೆ ತನ್ನ ಅನುಮೋದನೆಯ ಮುದ್ರೆಯನ್ನಷ್ಟೇ ಒತ್ತಲು ತನ್ನ ಪಕ್ಷವು ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಟಿಎಂಸಿ ನಾಯಕರೋರ್ವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರಕಾರದಡಿ ಕಾಂಗ್ರೆಸ್ ವಿರುದ್ಧ ದಾಳಿಗಾಗಿ ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಧ್ವನಿಯೆತ್ತಿವೆ.
ಅತ್ತ ಬಿಜೆಪಿಯು,ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರಾವಧಿಯಲ್ಲಿ ಸಂವಿಧಾನದ ಉಲ್ಲಂಘನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿತ್ತು ಎಂದು ಬಿಂಬಿಸಿದೆ. ಮೋದಿ ಸರಕಾರವು ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ಸಂವಿಧಾನದ ಪಾಲನೆ ಮತ್ತು ತತ್ವಗಳನ್ನು ಬಲಗೊಳಿಸಿದೆ ಎಂದು ಅದು ಪ್ರತಿಪಾದಿಸಿದೆ.