ಸರಕಾರದ ಶಿಷ್ಯ ವೇತನ ಪ್ರಸಕ್ತ ದಿನದ ವೆಚ್ಚವನ್ನು ಸರಿದೂಗಿಸಲು ಸಾಕಾಗದು: ಸಂಸದೀಯ ಸಮಿತಿ

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಶಿಕ್ಷಣ ಮುಂದುವರಿಸಲು ನೀಡಲಾಗುವ ವಾರ್ಷಿಕ ಶಿಷ್ಯವೇತನ ಪ್ರಸಕ್ತ ದಿನದ ವೆಚ್ಚವನ್ನು ಸರಿದೂಗಿಸಲು ಸಾಕಾಗದು ಎಂದು ಸಂಸದೀಯ ಸ್ಥಾಯಿ ಸಮಿತಿ ಗಮನ ಸೆಳೆದಿದೆ.
ಆದುದರಿಂದ ಹಣದುಬ್ಬರದ ಪ್ರಮಾಣವನ್ನು ನಿಯಂತ್ರಿಸುವುದಕ್ಕಾಗಿ ಶಿಷ್ಯ ವೇತನದ ಮೊತ್ತವನ್ನು ಕಾಲ ಕಾಲಕ್ಕೆ ಪರಿಷ್ಕರಿಸುವಂತೆ ಅದು ಶಿಫಾರಸು ಮಾಡಿದೆ.
2025-26ನೇ ಸಾಲಿನ ಅನುದಾನ ಬೇಡಿಕೆಗಳ ಕುರಿತ ತನ್ನ ಇತ್ತೀಚೆಗಿನ ವರದಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ಸ್ಥಾಯಿ ಸಮಿತಿ, ಶಿಕ್ಷಣ ಸಚಿವಾಲಯ ಹಾಗೂ ಇತರ ಪಾಲುದಾರರೊಂದಿಗಿನ ಸಹಯೋಗದೊಂದಿಗೆ ಶಿಷ್ಯ ವೇತನದ ಮೊತ್ತವನ್ನು ಪರಿಷ್ಕರಿಸುವಂತೆ ಆಗ್ರಹಿಸಿದೆ.
ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯನ್ನು ಸೋಮವಾರ ಸಂಸತ್ತಿನ ಮುಂದಿರಿಸಿದೆ.
Next Story