ಗುಜರಾತ್: ಶಿಕ್ಷಕನಿಂದ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಗಾಂಧಿನಗರ: ಗುಜರಾತ್ ನ ಸಾಬರ್ ಕಾಂತದಲ್ಲಿರುವ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರ ಮೇಲೆ ಅದೇ ಶಾಲೆಯ ಶಿಕ್ಷಕನೊಬ್ಬ ಅತ್ಯಾಚಾರಗೈದ ಘಟನೆಯೊಂದು ವರದಿಯಾಗಿದೆ. ‘ಬೇಟಿ ಬಚಾವೊ, ಬೇಟಿ ಪಢಾವೊ’ ಎಂಬ ವಿಷಯದ ಕುರಿತ ಭಾಷಣಕ್ಕಾಗಿ ಶಹಭಾಸ್ ಗಿರಿ ಪಡೆದ ಕೆಲವೇ ದಿನಗಳಲ್ಲಿ 15 ವರ್ಷದ ಬಾಲಕಿಯ ಮೇಲೆ ಅಮಾನವೀಯ ಲೈಂಗಿಕ ದಾಳಿ ನಡೆದಿದೆ.
ಈ ನೋವಿನ ಹೊರತಾಗಿಯೂ, ಬಾಲಕಿಯು ಅಸಾಧಾರಣ ಮನೋದಾರ್ಢ್ಯವನ್ನು ತೋರಿಸಿದ್ದು ಫೆಬ್ರವರಿ 27ರಂದು ಆರಂಭಗೊಳ್ಳುವ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಫೆಬ್ರವರಿ 7ರಂದು, 33 ವರ್ಷದ ಶಿಕ್ಷಕನು ತನ್ನ ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ಬಾಲಕಿಯನ್ನು ಹೊಟೇಲೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ತನ್ನೊಂದಿಗೆ ಸಹಕರಿಸದಿದ್ದರೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಾಗಿ ಆತ ಬೆದರಿಕೆಯೊಡ್ಡಿದ್ದನು ಎನ್ನಲಾಗಿದೆ.
ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.
Next Story