ಗುಜರಾತ್ 200 ತೋಳಗಳಿಗೆ ಆವಾಸ ಸ್ಥಾನ: ಗಣತಿ ವರದಿ
ಸಾಂದರ್ಭಿಕ ಚಿತ್ರ | PC : NDTV
ಅಹಮದಾಬಾದ್: ಗುಜರಾತ್ ರಾಜ್ಯದಲ್ಲಿ 222 ಭಾರತೀಯ ತೋಳಗಳಿವೆ ಎಂದು ಗುಜರಾತ್ ಅರಣ್ಯ ಮತ್ತು ಪರಿಸರ ಇಲಾಖೆ ನಡೆಸಿರುವ ಇತ್ತೀಚಿನ ಗಣತಿಯಲ್ಲಿ ಅಂದಾಜಿಸಲಾಗಿದೆ.
ಈ ಗಣತಿ ಕಾರ್ಯವನ್ನು ಗುಜರಾತ್ ಪರಿಸರ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಸಹಯೋಗದೊಂದಿಗೆ 2023ರಲ್ಲಿ ನಡೆಸಲಾಗಿತ್ತು. 13 ಜಿಲ್ಲೆಗಳಲ್ಲಿ ತೋಳಗಳ ಸಮೀಕ್ಷೆ ನಡೆಸಲಾಗಿದ್ದು, ಅವುಗಳ ಹಂಚಿಕೆ ಹಾಗೂ ಆವಾಸ ಸ್ಥಾನಗಳ ಬಗ್ಗೆ ಮಹತ್ವಪೂರ್ಣ ಅಂಶಗಳು ಪತ್ತೆಯಾಗಿವೆ ಎಂದು ಸೋಮವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಗುಜರಾತ್ ನ ಭಾವ್ ನಗರ್ ಜಿಲ್ಲೆಯಲ್ಲಿ ಅತ್ಯಧಿಕ 80 ತೋಳಗಳು ಪತ್ತೆಯಾಗಿದ್ದು, ನಂತರ ನರ್ಮದಾ ಜಿಲ್ಲೆಯಲ್ಲಿ 39, ಬನಸ್ಕಾಂತ ಜಿಲ್ಲೆಯಲ್ಲಿ 36, ಸುರೇಂದ್ರನಗರ್ ಜಿಲ್ಲೆಯಲ್ಲಿ 18, ಜಾಮ್ ನಗರ ಹಾಗೂ ಮೊರ್ಬಿ ಜಿಲ್ಲೆಗಳಲ್ಲಿ ತಲಾ 12 ಹಾಗೂ ಕಛ್ ಜಿಲ್ಲೆಯಲ್ಲಿ 9 ತೋಳಗಳು ಕಂಡು ಬಂದಿವೆ.
ಇದಲ್ಲದೆ, ಪೋರಬಂದರ್, ಮೆಹ್ಸಾನಾ, ನವ್ಸಾರಿ, ಪಟನ್, ಅರಾವಳಿ ಹಾಗೂ ಸೂರತ್ ಜಿಲ್ಲೆಗಳಲ್ಲೂ ತೋಳಗಳ ಉಪಸ್ಥಿತಿ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಗುಜರಾತ್ ನಲ್ಲಿ ತೋಳಗಳು ಮುಖ್ಯವಾಗಿ ಅರಣ್ಯಗಳು ಹಾಗೂ ಮರಳುಗಾಡುಗಳಲ್ಲಿ ಕಂಡು ಬರುತ್ತವೆ. ಅವುಗಳ ನೈಸರ್ಗಿಕ ಆವಾಸ ಸ್ಥಾನಗಳೂ ವೇಲಾವದರ್ ಹಾಗೂ ಸುತ್ತಮುತ್ತಲಿನ ಧೊಲೆರಾದಲ್ಲಿರುವ ಕಾಡು ಕೋಳಿ ರಾಷ್ಟ್ರೀಯ ಉದ್ಯಾನವನ ಹೊಂದಿರುವ ಭಾವ್ ನಗರ್ ನಲ್ಲಿನ ಭಲ್ ಪ್ರದೇಶವನ್ನು ಒಳಗೊಂಡಿದೆ.
ತೋಳಗಳು ನೈಸರ್ಗಿಕ ಮಾಂಸಾಹಾರಿಗಳಾಗಿದ್ದು, ವೇಲಾವರ್ ನಲ್ಲಿ ಕಾಡುಕೋಳಿಗಳ ಸಂಖ್ಯೆಯ ನಿಯಂತ್ರಣಕ್ಕೆ ನೆರವು ನೀಡುತ್ತಿವೆ.