ಗುಜರಾತ್: ಶಿವಾಜಿ ಮಹಾರಾಜರ ಕುರಿತು ಆಕ್ಷೇಪಾರ್ಹ ಟೀಕೆ ಮಾಡಿದ ವ್ಯಕ್ತಿಯ ಬಂಧನ

Photo: PTI
ವಡೋದರಾ: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ವಡೋದರಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆರ್ಯನ್ ಪಟೇಲ್ ಸ್ನೇಹಿತನೊಂದಿಗೆ ವಾಗ್ವಾದದ ಸಂದರ್ಭದಲ್ಲಿ ಶಿವಾಜಿ ಮಹಾರಾಜರ ಕುರಿತು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದ ಎಂದು ವಡೋದರಾ ತಾಲೂಕು ಪೊಲೀಸರು ರವಿವಾರ ತಿಳಿಸಿದರು. ಈ ಟೀಕೆಗಳನ್ನು ವ್ಯಕ್ತಿಯೋರ್ವರು ತನ್ನ ಮೊಬೈಲ್ ಫೋನ್ನಲ್ಲಿ ವೀಡಿಯೊ ಮಾಡಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಆರೋಪಿಯು ಶಿವಾಜಿ ಮಹಾರಾಜರ ವಿರುದ್ಧ ಸಾರ್ವಜನಿಕವಾಗಿ ಅಸಭ್ಯ ಭಾಷೆಯನ್ನು ಬಳಸುವ ಮೂಲಕ ಹಿಂದು ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾನೆ ಎಂದು ದೂರುದಾರ ದೀಪಕ ಪಾಲ್ಕರ್ ಅರೋಪಿಸಿದ್ದಾರೆ.
Next Story