ಗ್ಯಾನವಾಪಿ ಪ್ರಕರಣ | ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ವತಿಯಿಂದ ಸಮೀಕ್ಷೆಗಾಗಿ ಅರ್ಜಿ
ಸೆಪ್ಟೆಂಬರ್ 6ಕ್ಕೆ ವಿಚಾರಣೆ : ವಾರಾಣಸಿ ನ್ಯಾಯಾಲಯ
PC : PTI
ವಾರಾಣಸಿ : ಗ್ಯಾನವಾಪಿ ಸಂಕೀರ್ಣದಲ್ಲಿರುವ ಉಳಿದ ಭಾಗಗಳಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ವತಿಯಿಂದ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ವಾರಾಣಸಿ ನ್ಯಾಯಾಲಯವು ಸೆಪ್ಟೆಂಬರ್ 6ಕ್ಕೆ ನಿಗದಿಪಡಿಸಿದೆ ಎಂದು ಬುಧವಾರ ವಕೀಲರೊಬ್ಬರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು ಹಾಗೂ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಅವರು ತಮ್ಮ ದೃಷ್ಟಿಕೋನಗಳನ್ನು ಮಂಡಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೂಪರ ವಾದಿಗಳ ವಾದವನ್ನು ಆಲಿಸಿದ ಹಿರಿಯ ವಿಭಾಗೀಯ ಕ್ಷಿಪ್ರ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಜುಗಲ್ ಶಂಭು ಅವರು ಮುಂದಿನ ವಿಚಾರಣಾ ದಿನಾಂಕವನ್ನು ನಿಗದಿಗೊಳಿಸಿದ್ದಾರೆ ಎಂದು ಹಿಂದೂ ಪರ ವಾದಿಗಳನ್ನು ಪ್ರತಿನಿಧಿಸುತ್ತಿರುವ ವಕೀಲ ಮದನ್ ಮೋಹನ್ ಯಾದವ್ ತಿಳಿಸಿದ್ದಾರೆ.
ಗ್ಯಾನವಾಪಿ ಸಂಕೀರ್ಣದಲ್ಲಿರುವ ಮಸೀದಿಯ ಗುಮ್ಮಟದ ಮಧ್ಯಭಾಗದಡಿ ಜ್ಯೋತಿರ್ಲಿಂಗದ ಅಸಲಿ ಸ್ಥಳವಿದೆ ಎಂದು ಹಿಂದೂ ವಾದಿಗಳ ಪರ ಯಾದವ್ ವಾದಿಸಿದ್ದಾರೆ.