ಹರ್ಯಾಣ ವಿಧಾನಸಭಾ ಚುನಾವಣೆ: ಬಿಜೆಪಿಗೆ ಮತ ಚಲಾಯಿಸುವಂತೆ ತನ್ನ ಬೆಂಬಲಿಗರಿಗೆ ಸೂಚಿಸಿದ ದೇರಾ ಸಚ್ಚಾ ಸೌಧ
ಇತ್ತೀಚೆಗೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿರುವ ದೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ಸಿಂಗ್
PC : PTI
ಹೊಸದಿಲ್ಲಿ: 20 ದಿನಗಳ ಪೆರೋಲ್ ಮೇಲೆ ರೋಹ್ಟಕ್ ನ ಸುನಾರಿಯ ಕಾರಾಗೃಹದಿಂದ ಗುರ್ಮೀತ್ ಸಿಂಗ್ ಹೊರ ಬಂದ ಮರುದಿನವೇ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಚಲಾಯಿಸುವಂತೆ ದೇರಾ ಮುಖ್ಯ ಕಚೇರಿ ತನ್ನ ಬೆಂಬಲಿಗರಿಗೆ ಕರೆ ನೀಡಿದೆ.
ಗುರುವಾರ ತಡರಾತ್ರಿ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌಧದ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ತನ್ನ ಬೆಂಬಲಿಗರಿಗೆ ಈ ಸಂದೇಶವನ್ನು ರವಾನಿಸಲಾಗಿದೆ. ಇಲ್ಲಿಯವರೆಗೆ, ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಸತ್ಸಂಗ ವೇದಿಕೆಯಿಂದ ತನ್ನ ಬೆಂಬಲಿಗರಿಗೆ ಇಂತಹ ಸೂಚನೆಯನ್ನು ಡೇರಾ ನೀಡುತ್ತಾ ಬರುತ್ತಿತ್ತು.
ವಿಶ್ವಸನೀಯ ಮೂಲಗಳ ಪ್ರಕಾರ, ಸತ್ಸಂಗ ವೇದಿಕೆಯಿಂದ ಇಂತಹ ಯಾವುದೇ ಪ್ರಕಟಣೆಯನ್ನು ಮಾಡಲಾಗಿರದಿದ್ದರೂ, ಡೇರಾದ ಪದಾಧಿಕಾರಿಗಳು ಸತ್ಸಂಗದಲ್ಲಿ ಭಾಗವಹಿಸಿದ್ದ ಬೆಂಬಲಿಗರಿಗೆ ಬಿಜೆಪಿಗೆ ಮತ ಚಲಾಯಿಸುವಂತೆ ಮುಕ್ತವಾಗಿ ಕರೆ ನೀಡಿದ್ದಾರೆ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.
Next Story