ಹರ್ಯಾಣ: ರೈತರೊಂದಿಗೆ ಸಂವಾದ ನಡೆಸುತ್ತಾ ಗದ್ದೆಯಲ್ಲಿ ಭತ್ತದ ಸಸಿ ನೆಟ್ಟ ರಾಹುಲ್ ಗಾಂಧಿ!
ಹರ್ಯಾಣದ ಸೋನಿಪತ್ ನಲ್ಲಿ ಟ್ರ್ಯಾಕ್ಟರ್ ಓಡಿಸಿದ ಕಾಂಗ್ರೆಸ್ ನಾಯಕ
ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರ್ಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು ಹಾಗೂ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಕೆಲ ಸಮಯ ಕಳೆದರು.
ಅವರು ಭತ್ತದ ಸಸಿ ನೆಡುವ ಕೆಲಸದಲ್ಲೂ ಪಾಲ್ಗೊಂಡರು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಶನಿವಾರ ಮುಂಜಾನೆ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮವನ್ನು ತಲುಪಿದರು.
ಇದು ಪೂರ್ವಸಿದ್ಧತೆಯಿಲ್ಲದ ಭೇಟಿಯಾಗಿದೆ ... ಅವರು ಗ್ರಾಮಸ್ಥರು ಹಾಗೂ ಹೊಲಗಳಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಂವಾದ ನಡೆಸಿದರು. ರಾಹುಲ್ ಜಿ ಸಹ ಭತ್ತದ ಸಸಿ ನೆಡುವ ಕೆಲಸದಲ್ಲಿ ಪಾಲ್ಗೊಂಡು ಟ್ರ್ಯಾಕ್ಟರ್ ಓಡಿಸಿದರು ಎಂದು ಸೋನಿಪತ್ ಗೊಹಾನಾದ ಕಾಂಗ್ರೆಸ್ ಶಾಸಕ ಜಗ್ಬೀರ್ ಸಿಂಗ್ ಮಲಿಕ್ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.
ರಾಹುಲ್ ಗಾಂಧಿ ದಿಲ್ಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿ ನಮ್ಮ ಊರಿಗೆ ಆಗಮಿಸಿದರು ಎಂದು ಶಾಸಕ ಮಲಿಕ್ ಹೇಳಿದರು.
ಕಾಂಗ್ರೆಸ್ ನ ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದ ಚಿತ್ರಗಳಲ್ಲಿ, ರಾಹುಲ್ ಗಾಂಧಿಯವರು ತಮ್ಮ ನೆಚ್ಚಿನ ಬಿಳಿ ಟೀ ಶರ್ಟ್ ಮತ್ತು ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಾಮಸ್ಥರೊಂದಿಗೆ ಗದ್ದೆಗೆ ಕಾಲಿಟ್ಟರು.
हरियाणा में किसानों के बीच पहुंचे जननायक @RahulGandhi जी। pic.twitter.com/bfX3iUgkxt
— Congress (@INCIndia) July 8, 2023