ಜಿ-20 ಶೃಂಗ ಸಭೆ ನಡೆಯುತ್ತಿರುವ ಪ್ರಗತಿ ಮೈದಾನ ಸಹಿತ ದಿಲ್ಲಿಯ ಹಲವೆಡೆ ಭಾರೀ ಮಳೆ
Photo: Twitter@NDTV
ಹೊಸದಿಲ್ಲಿ: 18ನೇ ಜಿ20 ನಾಯಕರ ಶೃಂಗಸಭೆ ನಡೆಯುತ್ತಿರುವ ಪ್ರಗತಿ ಮೈದಾನ ಸೇರಿದಂತೆ ದಿಲ್ಲಿಯ ಹಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗಿದೆ.
ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ತೀವ್ರತೆಯ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.
IMD ಪ್ರಕಾರ ಕಳೆದ 24 ಗಂಟೆಗಳಲ್ಲಿ ದಿಲ್ಲಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್.
ಮೆಗಾ ಜಿ 20 ಶೃಂಗಸಭೆಯ ವೇದಿಕೆಯಾದ ಭಾರತ್ ಮಂಟಪದ ಬಳಿ ಭಾರೀ ಮಳೆ ಸುರಿದಿರುವ ದೃಶ್ಯ ಕಂಡುಬಂದಿದೆ.. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯ ಪರಿಣಾಮ ಹಲವು ಪ್ರದೇಶಗಳಲ್ಲಿ ಜಲಾವೃತವಾಗಿದ್ದು, ಇದು ಅಧಿಕಾರಿಗಳಿಗೆ ಸವಾಲಾಗಿದೆ.
ದಿಲ್ಲಿಯ ಸಫ್ದರ್ಜಂಗ್, ವಿಮಾನ ನಿಲ್ದಾಣ, ರಾಜ್ ಘಾಟ್, ವಸಂತ್ ಕುಂಜ್, ಮುನಿರ್ಕಾ, ನರೇಲಾ ಮತ್ತು ಇತರ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಲಘು ಮಳೆ ಸುರಿದು ರವಿವಾರ ಬೆಳಗಿನವರೆಗೂ ಮುಂದುವರೆಯಿತು.
Next Story