ಹಿಮಾಚಲಪ್ರದೇಶ | ಮುಂದುವರಿದ ಹಿಮ, ಮಳೆ ; 4 ರಾಷ್ಟ್ರೀಯ ಹೆದ್ದಾರಿ ಸಹಿತ 645 ರಸ್ತೆಗಳಲ್ಲಿ ಸಂಚಾರ ರದ್ದು
Photo: PTI
ಶಿಮ್ಲಾ : ಹಿಮಾಚಲಪ್ರದೇಶದಾದ್ಯಂತ ಹಿಮಪಾತ ಹಾಗೂ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 645 ರಸ್ತೆಗಳಲ್ಲಿ ಸೋಮವಾರ ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ.
ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ 242, ಲಾಹೌಲ್ ಹಾಗೂ ಸ್ಪಿತಿಯಲ್ಲಿ 157, ಕುಲ್ಲುವಿನಲ್ಲಿ 93, ಛಾಂಬಾದಲ್ಲಿ 61 ಹಾಗೂ ಮಂಡಿಯಲ್ಲಿ 51 ರಸ್ತೆಗಳಲ್ಲಿ ಸಂಚಾರ ರದ್ದುಗೊಳಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಚಿರ್ಗಾಂವ್ನಲ್ಲಿ 35 ಸೆ.ಮೀ., ಖದ್ರಾಲದಲ್ಲಿ 30 ಸೆ.ಮೀ., ಮನಾಲಿಯಲ್ಲಿ 23.6 ಸೆ.ಮೀ., ನಾರ್ಕಂಡದಲ್ಲಿ 20 ಸೆ.ಮಿ., ಗೊಂಡ್ಲಾದಲ್ಲಿ 16.5 ಸೆ.ಮೀ., ಕೀಲೋಂಗ್ನಲ್ಲಿ 15.2 ಸೆ.ಮೀ., ಶಿಲಾರುದಲ್ಲಿ 15 ಸೆ.ಮೀ., ಸಾಂಗ್ಲಾದಲ್ಲಿ 8.2 ಸೆ.ಮೀ. ಕುಕುಮ್ಸೇರಿಯಲ್ಲಿ 7.1 ಸೆ.ಮೀ., ಕಲ್ಪಾದಲ್ಲಿ 7 ಸೆ.ಮೀ. ಹಾಗೂ ಶಿಮ್ಲಾದಲ್ಲಿ 2 ಸೆ.ಮೀ. ಹಿಮಪಾತವಾಗಿದೆ ಎಂದು ಸ್ಥಳೀಯ ಹವಾಮಾನ ಇಲಾಖೆಯ ಕಚೇರಿ ತಿಳಿಸಿದೆ.
ರಾಜ್ಯದಲ್ಲಿ ಭಾರೀ ಮಳೆ ಸುರಿದಿದೆ. ಸುಂದರ್ನಗರದಲ್ಲಿ ದಾಖಲೆಯ ಅತ್ಯಧಿಕ 60 ಮಿ.ಮೀ. ಮಳೆ ಸುರಿದಿದೆ. ಕರ್ಸೋಗ್ನಲ್ಲಿ 56 ಮಿ.ಮೀ. ಜೋಗಿಂದರ್ನಗರ್ನಲ್ಲಿ 53 ಮಿ.ಮೀ. ಕಟುಲಾದಲ್ಲಿ 52 ಮಿ.ಮೀ., ಬೈಜ್ನಾಥ್ನಲ್ಲಿ 48 ಮಿ.ಮೀ. ಸ್ಲ್ಯಾಪ್ಪರ್ನಲ್ಲಿ 46 ಮಿ.ಮೀ. ಭುಂಟರ್ನಲ್ಲಿ 49 ಮಿ.ಮೀ., ಸಿಯೋಬಾಗ್ನಲ್ಲಿ 49 ಮಿ.ಮೀ. ಹಾಗೂ ಬಾಘಿಯಲ್ಲಿ 42 ಮೀ.ಮೀ. ಮಳೆ ಸುರಿದಿದೆ ಎಂದು ಅದು ತಿಳಿಸಿದೆ.
ಕನಿಷ್ಠ ತಾಪಮಾನದಲ್ಲಿ ಗಣನೀಯವಾದ ಯಾವುದೇ ಬದಲಾವಣೆ ಸಂಭವಿಸಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.