ಹಿಮಾಚಲ ಪ್ರದೇಶ | ಸ್ಪಿತಿ ಗ್ರಾಮಕ್ಕೆ ಅಪ್ಪಳಿಸಿದ ಹಿಮಪಾತ: ಮಳೆ, ಹಿಮ ಸುರಿಯುವಿಕೆಯಿಂದ 650 ರಸ್ತೆಗಳು ಬಂದ್
Photo: ANI
ಶಿಮ್ಲಾ: ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿತಿ ಜಿಲ್ಲೆಯ ಗ್ರಾಮವೊಂದಕ್ಕೆ ರವಿವಾರ ಮುಂಜಾನೆ ಹಿಮಪಾತ ಅಪ್ಪಳಿಸಿದ್ದು, ಚೆನಾಬ್ ನದಿಯ ಹರಿಯುವಿಕೆಗೆ ಅಡ್ಡಿಯುಂಟು ಮಾಡುವ ಮೂಲಕ ನೆರೆಯ ಪ್ರದೇಶಗಳಲ್ಲಿ ಅಪಾಯದ ಸ್ಥಿತಿ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಭಾರಿ ಮಳೆ ಹಾಗೂ ಹಿಮ ಸುರಿಯುತ್ತಿರುವುದರಿಂದ 6ಕ್ಕೂ ಹೆಚ್ಚು ಹಿಮಪಾತ ಹಾಗೂ ಭೂಕುಸಿತ ಘಟನೆಗಳು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇದರಿಂದ 5 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 650 ರಸ್ತೆಗಳು ಬಂದ್ ಆಗಿವೆ ಎಂದೂ ಅವರು ಹೇಳಿದ್ದಾರೆ.
ಹಿಮಪಾತ ಘಟನೆಯಲ್ಲಿ ಯಾವುದೇ ಗಾಯಾಳುಗಳು ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಲಹೌಲ್ ಮತ್ತು ಸ್ಪಿತಿ ಜಿಲ್ಲೆಯ ಜಸ್ರಾತ್ ಗ್ರಾಮದ ಬಳಿಯ ದಾರಾ ಜಲಪಾತದ ಬಳಿ ಹಿಮಪಾತ ಸಂಭವಿಸಿರುವುದರಿಂದ ಚೆನಾಬ್ ನದಿಯ ಹರಿಯುವಿಕೆಗೆ ಅಡ್ಡಿಯುಂಟಾಗಿದೆ. ಅತಿ ಎತ್ತರದ ಪ್ರದೇಶದಲ್ಲಿರುವ ಈ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಪ್ರಮಾಣದ ಹಿಮಪಾತ ವರದಿಯಾಗಿದೆ.
Next Story