ಕಾಂಗ್ರೆಸ್ ಆರೋಪದ ಬಗ್ಗೆ ಸೆಬಿ ಮುಖ್ಯಸ್ಥೆಯ ಮೌನವನ್ನು ಪ್ರಶ್ನಿಸಿದ ಹಿಂಡೆನ್ಬರ್ಗ್
ಮಾಧವಿ ಪುರಿ ಬುಚ್ | PTI
ಹೊಸದಿಲ್ಲಿ: ಕಾಂಗ್ರೆಸ್ ಮಾಡಿರುವ ಆರೋಪದ ಬಗ್ಗೆ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮೌನವನ್ನು ಅಮೆರಿಕ ಮೂಲದ ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆಯು ಪ್ರಶ್ನಿಸಿದೆ.
ಹಿಂಡೆನ್ಬರ್ಗ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಒಡೆತನದ ಖಾಸಗಿ ಸಲಹಾ ಘಟಕವು ಮಾಧವಿ ಪುರಿ ಬುಚ್ ಸೆಬಿಯ ಪೂರ್ಣಾವಧಿ ಸದಸ್ಯೆಯಾದ ಸಮಯದಲ್ಲಿ ಸೆಬಿಯಿಂದ ನಿಯಂತ್ರಿಸಲ್ಪಟ್ಟ ಬಹು ಪಟ್ಟಿಮಾಡಿದ ಕಂಪನಿಗಳಿಂದ 99% ದಷ್ಟು ಪಾವತಿಗಳನ್ನು ಸ್ವೀಕರಿಸಿದ ಬಗ್ಗೆ ಹೊಸ ಆರೋಪಗಳು ಕೇಳಿ ಬಂದಿದೆ. ಆದರೆ ಬುಚ್ ಈ ವಿಷಯದಲ್ಲಿ ಒಂದು ವಾರದಿಂದ ಮೌನವನ್ನು ಮುಂದುವರಿಸಿದೆ ಎಂದು ಹೇಳಿದೆ.
New allegations have emerged that the private consulting entity, 99% owned by SEBI Chair Madhabi Buch, accepted payments from multiple listed companies regulated by SEBI during her time as SEBI Whole-Time Member.
— Hindenburg Research (@HindenburgRes) September 11, 2024
The companies include: Mahindra & Mahindra, ICICI Bank, Dr.…
ಮಾಧವಿ ಪುರಿ ಬುಚ್ ಸೆಬಿಯ ಪೂರ್ಣಾವಧಿ ಸದಸ್ಯೆಯಾದ ಬಳಿಕ ತನ್ನ ಸಲಹಾ ಸಂಸ್ಥೆ ಅಗೋರಾ ಅಡ್ವೈಸರಿ ಪ್ರೈ.ಲಿ.ಮೂಲಕ ಮಹೀಂದ್ರ ಆ್ಯಂಡ್ ಮಹೀಂದ್ರ, ಐಸಿಐಸಿಐ ಬ್ಯಾಂಕ್, ಡಾ. ರೆಡ್ಡೀಸ್ ಮತ್ತು ಪಿಡಿಲೈಟ್ ಸೇರಿದಂತೆ 6 ಕಂಪನಿಗಳಿಂದ 2.95 ಕೋಟಿ ರೂ.ಗಳನ್ನು ಗಳಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು.
ಕಾಂಗ್ರೆಸ್ ಪ್ರಕಾರ, ಒಟ್ಟು ರೂ 2.95 ಕೋಟಿಗಳಲ್ಲಿ, ರೂ 2.59 ಕೋಟಿಗಳು ಕೇವಲ ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ನಿಂದ ಬಂದಿವೆ. ಇದಲ್ಲದೆ 2017-24ರ ನಡುವೆ ಐಸಿಐಸಿಐ ಬ್ಯಾಂಕಿನಲ್ಲಿ ಹುದ್ದೆಯನ್ನು ಹೊಂದಿದ್ದ ಬುಚ್ 16.80 ಕೋಟಿ ರೂ.ಆದಾಯ ಪಡೆದಿದ್ದರು ಎಂದು ಕಾಂಗ್ರೆಸ್ ಕಳೆದ ತಿಂಗಳು ಆರೋಪಿಸಿತ್ತು. ಆದರೆ, ಬುಚ್ಗೆ ಯಾವುದೇ ವೇತನ ನೀಡಿದ್ದನ್ನು ಐಸಿಐಸಿಐ ಹೇಳಿಕೆಯಲ್ಲಿ ನಿರಾಕರಿಸಿತ್ತು.