ಪ್ರತಿ ಭಾರತೀಯ ಭಾಷೆಗೆ ʼಹಿಂದಿʼ ಜೊತೆ ಸಂಬಂಧವಿದೆ: ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಹೊಸದಿಲ್ಲಿ: ಹಿಂದಿ ಪ್ರತಿಯೊಂದು ಭಾರತೀಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ʼಹಿಂದಿ ದಿವಸ್ʼ ಹಿನ್ನೆಲೆ ಶುಭಾಶಯಗಳನ್ನು ಕೋರಿ ಮಾತನಾಡಿದ ಅಮಿತ್ ಶಾ, ಎಲ್ಲಾ ಭಾರತೀಯ ಭಾಷೆಗಳು ರಾಷ್ಟ್ರದ ಹೆಮ್ಮೆ ಮತ್ತು ಪರಂಪರೆಯಾಗಿದೆ. ಅವುಗಳನ್ನು ಶ್ರೀಮಂತಗೊಳಿಸದೆ ದೇಶವು ಮುಂದುವರಿಯಲು ಸಾಧ್ಯವಿಲ್ಲ. ದೇಶದ ಎಲ್ಲಾ ನಾಗರಿಕರಿಗೆ ʼಹಿಂದಿ ದಿವಸʼದ ಶುಭಾಶಯಗಳು. ಅಧಿಕೃತ ಭಾಷೆ ಹಿಂದಿ ಪ್ರತಿಯೊಂದು ಭಾರತೀಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಹೇಳಿದ್ದಾರೆ.
ದೇಶದ ಅಧಿಕೃತ ಭಾಷೆಯಾಗಿ ಮತ್ತು ಸಾರ್ವಜನಿಕ ಸಂವಹನ ಭಾಷೆಯಾಗಿ ಹಿಂದಿ 75 ವರ್ಷಗಳನ್ನು ಪೂರೈಸಿದೆ. ಎಲ್ಲಾ ಭಾರತೀಯ ಭಾಷೆಗಳನ್ನು ಒಟ್ಟಿಗೆ ತೆಗೆದುಕೊಳ್ಳುವ ಮೂಲಕ ಅಧಿಕೃತ ಭಾಷೆ ಹಿಂದಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವನ್ನು ಸಾಕಾರಗೊಳಿಸಲು ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
Next Story