ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಆಲಂಗಿಸಿದ ಪೊಲೀಸ್ ಅಧಿಕಾರಿ ಅಮಾನತು
Screengrab from the video | PC: X
ಹೈದರಾಬಾದ್: ಸೋಮವಾರ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾರನ್ನು ಸಮವಸ್ತ್ರದಲ್ಲಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರು ಆಲಂಗಿಸಿದ ಕಾರಣಕ್ಕೆ ಅವರನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಅಮಾನತುಗೊಳಿಸಿದ್ದಾರೆ.
ವರದಿಗಳ ಪ್ರಕಾರ, ಸಾಯಿದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕಿಯು ಚುನಾವಣಾ ಪ್ರಚಾರ ನಡೆಸುವಾಗ ಉಮಾದೇವಿ ಕರ್ತವ್ಯನಿರತರಾಗಿದ್ದರು ಎಂದು ಹೇಳಲಾಗಿದೆ.
ಇದರ ಬೆನ್ನಿಗೇ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಉಮಾದೇವಿ ಅವರನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಕೆ. ಶ್ರೀನಿವಾಸ್ ರೆಡ್ಡಿ ಅಮಾನತುಗೊಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಹೈದರಾಬಾದ್ ಪ್ರದೇಶದಲ್ಲಿ ಮಾಧವಿ ಲತಾ ಅವರು ಚುನಾವಣಾ ಪ್ರಚಾರ ನಡೆಸುತ್ತಿರುವಾಗ ಅವರ ಬಳಿಗೆ ತೆರಳಿರುವ ಉಮಾದೇವಿ, ಮಾಧರಿ ಲತಾರ ಕೈ ಕುಲುಕಿ ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದಾರೆ. ಇಬ್ಬರು ಮುಗುಳ್ನಗುತ್ತಾ, ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡಿರುವುದನ್ನು ಅದರಲ್ಲಿ ನೋಡಬಹುದಾಗಿದೆ.
ರಾಮನವಮಿಯಂದು ಮಸೀದಿಯೊಂದರ ಕಡೆ ಕಾಲ್ಪನಿಕ ಬಾಣ ಬಿಡುತ್ತಿರುವ ಭಂಗಿ ಪ್ರದರ್ಶಿಸುವ ಮೂಲಕ ಕಳೆದ ವಾರ ಮಾಧರಿ ಲತಾ ವಿವಾದಕ್ಕೆ ತುತ್ತಾಗಿದ್ದರು. ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬೇಗಮ್ ಬಝಾರ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
Woman ASI of Saidabad police station suspended for shaking hand and hugging #BJP Candidate #MadhaviLatha on duty during her campaign in #Saidabad, #Hyderabad, #Telangana.#LokSabhaElections2024 pic.twitter.com/jDdF83CFH3
— Hate Detector (@HateDetectors) April 22, 2024