ಟಿವಿ ನಿರೂಪಕರ ಬಹಿಷ್ಕಾರದ ಬಗ್ಗೆ ನನಗೆ ಮಾಹಿತಿ ಇಲ್ಲ: ಬಿಹಾರ ಸಿಎಂ ನಿತೀಶ್ ಕುಮಾರ್
ನಿತೀಶ್ ಕುಮಾರ್ | Photo: PTI
ಪಾಟ್ನಾ: ಮೋದಿ ಪರ ಇರುವ ಚಾನೆಲ್ ನಿರೂಪಕರನ್ನು ಬಹಿಷ್ಕರಿಸುವ I.ND.I.A ಮೈತ್ರಿಕೂಟದ ನಿರ್ಧಾರದ ಬಗ್ಗೆ ಬಿಹಾರ ಸಿಎಂ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು, ಈ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮೈತ್ರಿಕೂಟದ ಸದಸ್ಯರು ಹಲವಾರು ಸುದ್ದಿ ನಿರೂಪಕರನ್ನು ಬಹಿಷ್ಕರಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ನಿತೀಶ್ ಕುಮಾರ್, ʼಈ ಬಗ್ಗೆ ನನಗೆ ಯಾವುದೇ ಕಲ್ಪನೆ ಇಲ್ಲ. ನಾನು ಪತ್ರಕರ್ತರ ಬೆಂಬಲಕ್ಕೆ ಇದ್ದೇನೆʼ ಎಂದು ಕುಮಾರ್ ತಿಳಿಸಿದರು.
ಮೈತ್ರಿಕೂಟದ ಕೆಲವು ಸದಸ್ಯರಿಗೆ ಕೆಲವು ಸಮಸ್ಯೆಗಳಿರಬಹುದು ಎಂದು ಭಾವಿಸುತ್ತೇನೆ, ಹಾಗಾಗಿ ಅವರು ಆ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ನಿತೀಶ್ ಕುಮಾರ್ ಹೇಳಿದರು.
ಕೆಲವು ಮಾಧ್ಯಮ ನಿರೂಪಕರನ್ನು ಪಟ್ಟಿ ಮಾಡಿದ್ದ ಇಂಡಿಯಾ ಮೈತ್ರಿಕೂಟವು ಅವರು ನಿರ್ವಹಿಸುವ ಚರ್ಚಾ ಕಾರ್ಯಕ್ರಮಗಳಿಗೆ ತನ್ನ ಸದಸ್ಯ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ತಿಳಿಸಿತ್ತು.
ಅರ್ನಾಬ್ ಗೋಸ್ವಾಮಿ (ರಿಪಬ್ಲಿಕ್ ಟಿವಿ), ಅದಿತಿ ತ್ಯಾಗಿ (ಭಾರತ್ ಎಕ್ಸ್ಪ್ರೆಸ್), ಅಮಿಶ್ ದೇವಗನ್ ಮತ್ತು ಅಮನ್ ಚೋಪ್ರಾ (ನ್ಯೂಸ್ 18 ಹಿಂದಿ), ಆನಂದ್ ನರಸಿಂಹನ್ (ಸಿಎನ್ಎನ್-ನ್ಯೂಸ್ 18), ಅಶೋಕ್ ಶ್ರೀವಾಸ್ತವ್ (ಡಿಡಿ ನ್ಯೂಸ್), ಸುಧೀರ್ ಚೌಧರಿ ಮತ್ತು ಚಿತ್ರಾ ತ್ರಿಪಾಠಿ (ಆಜ್ ತಕ್), ನಾವಿಕ ಕುಮಾರ್ (ಟೈಮ್ಸ್ ನೌ), ಗೌರವ್ ಸಾವಂತ್ ಮತ್ತು ಶಿವ ಆರೂರ್ (ಇಂಡಿಯಾ ಟುಡೆ ಟಿವಿ), ಪ್ರಾಚಿ ಪರಾಶರ್ (ಇಂಡಿಯಾ ಟಿವಿ), ರುಬಿಕಾ ಲಿಯಾಕತ್ (ಭಾರತ್ 24) ಮತ್ತು ಸುಶಾಂತ್ ಸಿನ್ಹಾ (ಟೈಮ್ಸ್ ನೌ ನವಭಾರತ್) ಮೊದಲಾದ ನಿರೂಪಕರನ್ನು ಇಂಡಿಯಾ ಮೈತ್ರಿಕೂಟವು ಬಹಿಷ್ಕರಿಸಿದೆ.
#WATCH | On the INDIA alliance's announcement to boycott several TV news anchors, Bihar CM Nitish Kumar says, "I have no idea about this...I am in support of journalists..." pic.twitter.com/sXzGER63bk
— ANI (@ANI) September 16, 2023