ಪಶ್ಚಿಮ ಬಂಗಾಳ, ಒಡಿಶಾಗಳಲ್ಲಿ ತೀವ್ರ ಉಷ್ಣ ಅಲೆ |ರೆಡ್ಅಲರ್ಟ್ ಹೊರಡಿಸಿದ ಐಎಂಡಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಒಡಿಶಾ ಮತ್ತು ಪ.ಬಂಗಾಳದ ಗಂಗಾನದಿ ಬಯಲು ಪ್ರದೇಶದಲ್ಲಿ ತೀವ್ರ ಉಷ್ಣ ಅಲೆಗಳಿಂದಾಗಿ ರೆಡ್ ಅಲರ್ಟ್ ಹೊರಡಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶನಿವಾರ ತಿಳಿಸಿದೆ.
ಪ.ಬಂಗಾಳದ ಗಂಗಾನದಿ ಬಯಲು ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದಲೂ ಉಷ್ಣ ಅಲೆಯಿದ್ದು, ಹೀಗಾಗಿ ರೆಡ್ ಅಲರ್ಟ್ ಹೊರಡಿಸಲಾಗಿದೆ. ಒಡಿಶಾ ವಿಶೇಷವಾಗಿ ಉತ್ತರ ಒಡಿಶಾದಲ್ಲಿಯೂ ಹಲವು ದಿನಗಳಿಂದ ತೀವ್ರ ತಾಪಮಾನದ ಸ್ಥಿತಿಯಿದೆ,ಹೀಗಾಗಿ ಅಲ್ಲಿಯೂ ರೆಡ್ಅಲರ್ಟ್ ಹೊರಡಿಸಲಾಗಿದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಶೋಮಾ ಸೇನ್ ರಾಯ್ ತಿಳಿಸಿದರು.
ಪ್ರಸ್ತುತ ಪೂರ್ವ ಭಾರತ,ದಕ್ಷಿಣ ಪೆನಿನ್ಸುಲಾರ್ ಪ್ರದೇಶ ಮತ್ತು ಉತ್ತರ ಕೇರಳದಲ್ಲಿ ತಾಪಮಾನವು ಅತ್ಯಧಿಕವಾಗಿದೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಪೂರ್ವ ಭಾರತ, ಬಿಹಾರ ಮತ್ತು ಜಾರ್ಖಂಡ್ಗಳಿಗಾಗಿ ಆರೇಂಜ್ ಅಲರ್ಟ್ ಮತ್ತು ಪೂರ್ವ ಉತ್ತರ ಪ್ರದೇಶ ಹಾಗೂ ಉತ್ತರ ಕೇರಳಕ್ಕಾಗಿ ಎಲ್ಲೋ ಅಲರ್ಟ್ ಹೊರಡಿಸಲಾಗಿದೆ ಎಂದೂ ಅವರು ತಿಳಿಸಿದರು.
Next Story