ರದ್ದುಗೊಂಡ ವೈಟಿಂಗ್ ಲಿಸ್ಟ್ ಟಿಕೆಟ್ಗಳಿಂದ 3 ವರ್ಷಗಳಲ್ಲಿ ರೂ. 1,230 ಕೋಟಿ ಆದಾಯ ಗಳಿಸಿದ ಭಾರತೀಯ ರೈಲ್ವೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರದ್ದುಗೊಂಡ ವೈಟಿಂಗ್ ಲಿಸ್ಟ್ ಟಿಕೆಟ್ಗಳಿಂದ ಭಾರತೀಯ ರೈಲ್ವೆಯು 2021 ಹಾಗೂ 2024(ಜನವರಿ) ನಡುವೆ ರೂ 1,229.85 ಕೋಟಿ ಗಳಿಸಿದೆ ಎಂದು ಆರ್ಟಿಐ ಮಾಹಿತಿಯಿಂದ ತಿಳಿದು ಬಂದಿದೆ ಎಂದು thehindu.com
ಮಧ್ಯಪ್ರದೇಶ ಮೂಲದ ಆರ್ಟಿಐ ಕಾರ್ಯಕರ್ತ ವಿವೇಕ್ ಪಾಂಡೆ ಈ ಮಾಹಿತಿ ಕೋರಿ ರೈಲ್ವೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ರೀತಿ ರದ್ದುಗೊಂಡ ವೈಟಿಂಗ್ ಲಿಸ್ಟ್ ಟಿಕೆಟ್ಗಳಿಂದ ರೈಲ್ವೆಯ ಗಳಿಕೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ ಎಂದು ಲಭ್ಯ ಮಾಹಿತಿಯಿಂದ ತಿಳಿದು ಬಂದಿದೆ.
2021 ರಲ್ಲಿ 2.53 ಕೋಟಿ ವೈಟಿಂಗ್ ಲಿಸ್ಟ್ ಟಿಕೆಟ್ಗಳು ರದ್ದುಗೊಂಡು ರೈಲ್ವೆ ರೂ. 242.68 ಕೋಟಿ ಗಳಿಸಿದ್ದರೆ, 2022ರಲ್ಲಿ 4.6 ಕೋಟಿ ಟಿಕೆಟ್ಗಳು ರದ್ದುಗೊಂಡು ರೈಲ್ವೆ ರೂ. 439.16 ಕೋಟಿ ಗಳಿಸಿತ್ತು. 2023ರಲ್ಲಿ 5.26 ಕೋಟಿ ಟಿಕೆಟ್ ರದ್ದುಗೊಂಡು ರೈಲ್ವೆ ರೂ. 505 ಕೋಟಿ ಗಳಿಸಿದ್ದರೆ ಈ ವರ್ಷದ ಜನವರಿಯಲ್ಲಿ 45.86 ಲಕ್ಷ ಟಿಕೆಟ್ಗಳು ರದ್ದುಗೊಂಡು ರೈಲ್ವೆ ರೂ. 43 ಕೋಟಿ ಗಳಿಸಿತ್ತು ಎಂದು ಆರ್ಟಿಐ ಮಾಹಿತಿಯಿಂದ ತಿಳಿದು ಬಂದಿದೆ.