ಹೆಚ್ಚುತ್ತಿರುವ ಅಪಘಾತ | ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ವಿಶೇಷ ಲೆಕ್ಕ ಪರಿಶೋಧನೆಗೆ ಆದೇಶಿಸಿದ ಡಿಜಿಸಿಎ
ಸಾಂದರ್ಭಿಕ ಚಿತ್ರ | PC : flywithgati.com
ಹೊಸ ದಿಲ್ಲಿ: ಇತ್ತೀಚೆಗೆ ತರಬೇತಿ ವಿಮಾನಗಳು ಭಾಗಿಯಾಗಿರುವ ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ವಿಶೇಷ ಲೆಕ್ಕ ಪರಿಶೋಧನೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಆದೇಶಿಸಿದೆ.
ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ಸೆಪ್ಟೆಂಬರ್ ನಿಂದ ನವೆಂಬರ್ 2024ರವರೆಗೆ ಮೂರು ಹಂತದಲ್ಲಿ ನಡೆಸಲಾಗುತ್ತದೆ. ಈ ವಿಶೇಷ ಲೆಕ್ಕ ಪರಿಶೋಧನೆಯು 33 ವಿಮಾನ ಹಾರಾಟ ತರಬೇತಿ ಸಂಸ್ಥೆಗಳನ್ನು ಒಳಗೊಳ್ಳಲಿದೆ.
ಈ ಹಿಂದೆ ಇಂತಹ ವಿಶೇಷ ಲೆಕ್ಕ ಪರಿಶೋಧನೆಯನ್ನು 2022ರಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚೆಗೆ ನಡೆದ ಸರಣಿ ತರಬೇತಿ ವಿಮಾನಗಳ ಅಪಘಾತದ ಪ್ರಕರಣಗಳು ನಡೆದಿದೆ. ವಿಮಾನ ಹಾರಾಟ ತರಬೇತಿ ಸಂಸ್ಥೆಗಳು ಚಾಲ್ತಿಯಲ್ಲಿರುವ ವಿಮಾನ ಹಾರಾಟ ನಿಯಮಾವಳಿಗಳು ಹಾಗೂ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುತ್ತಿವೆಯೇ ಎಂಬ ಬಗ್ಗೆ ಲೆಕ್ಕ ಪರಿಶೋಧನೆಯಲ್ಲಿ ಮಾಹಿತಿ ಕಲೆಹಾಕಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಹೇಳಿದೆ.
Next Story