ಭಾರತದಲ್ಲಿ ಮೊದಲ ಬಾರಿಗೆ ಸಾಕು ಬೆಕ್ಕುಗಳಲ್ಲಿ ಹಕ್ಕಿ ಜ್ವರದ ಪ್ರಕರಣ ಪತ್ತೆ

ಸಾಂದರ್ಭಿಕ ಚಿತ್ರ | freepik.com
ಹೊಸದಿಲ್ಲಿ: ಭಾರತದಲ್ಲಿ ಮೊದಲ ಬಾರಿಗೆ ಸಾಕು ಬೆಕ್ಕುಗಳಲ್ಲಿ ಹಕ್ಕಿ ಜ್ವರ (ಎಚ್5ಎನ್1)ದ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಈ ಪ್ರಕರಣಗಳು ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ವರದಿಯಾಗಿದೆ.
ಇದು ರೂಪಾಂತರಗೊಂಡು ಮಾನವರು ಸೇರಿದಂತೆ ಸಸ್ತನಿಗಳಿಗೆ ಸೋಂಕು ಉಂಟು ಮಾಡುವ ವೈರಸ್ನ ಸಾಮರ್ಥ್ಯದ ಕುರಿತು ಗಂಭೀರ ಕಳವಳ ಉಂಟು ಮಾಡಿದೆ.
ಹಕ್ಕಿ ಜ್ವರ ವೈರಸ್ ಸೋಂಕಿತ ಬೆಕ್ಕುಗಳಲ್ಲಿ ತೀವ್ರ ಜ್ವರ, ಹಸಿವಿನ ಕೊರತೆ, ಆಲಸ್ಯ ಸೇರಿದಂತಹ ಹಲವು ರೋಗ ಲಕ್ಷಣಗಳು ಕಂಡು ಬಂದಿವೆ. ಈ ರೋಗ ಲಕ್ಷಣಗಳು ಕಾಣಿಸಿಕೊಂಡ ಒಂದರಿಂದ ಮೂರು ದಿನಗಳಲ್ಲಿ ಬೆಕ್ಕುಗಳು ಸಾವನ್ನಪ್ಪಿವೆ ಎಂದು ಮೂಲಗಳು ತಿಳಿಸಿವೆ.
Next Story